ADVERTISEMENT

ಡಿಎಂಕೆ ಸಂಸದೀಯ ಪಕ್ಷದ ನಾಯಕಿಯಾಗಿ ಕನಿಮೊಳಿ ನೇಮಕ

ಪಿಟಿಐ
Published 11 ಜೂನ್ 2024, 15:47 IST
Last Updated 11 ಜೂನ್ 2024, 15:47 IST
ಕನಿಮೊಳಿ
ಕನಿಮೊಳಿ   

ಚೆನೈ: ತೂತ್ತುಕುಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದೆ ಕನಿಮೊಳಿ ಅವರನ್ನು ಸಂಸದೀಯ ಪಕ್ಷದ ನಾಯಕಿಯಾಗಿ ನೇಮಿಸಲಾಗಿದೆ ಎಂದು ಡಿಎಂಕೆ ಹೇಳಿದೆ.

ಶ್ರೀಪೆರಂಬದೂರ್ ಸಂಸದ ಟಿ.ಆರ್. ಬಾಲು ಅವರು ಈ ಹಿಂದೆ ಡಿಎಂಕೆ ಸಂಸದೀಯ ಪಕ್ಷದ ನಾಯಕರಾಗಿದ್ದರು. ಈಗ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ದಯಾನಿಧಿ ಮಾರನ್ ಅವರು ಲೋಕಸಭೆಯಲ್ಲಿ ಪಕ್ಷದ ಉಪನಾಯಕರಾಗಲಿದ್ದಾರೆ ಎಂದು ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸೋಮವಾರ ತಿಳಿಸಿದ್ದಾರೆ.

ADVERTISEMENT

ಮಾಜಿ ಕೇಂದ್ರ ಸಚಿವ ಎ. ರಾಜಾ ಲೋಕಸಭೆಯಲ್ಲಿ ವಿಪ್ ಆಗಿ, ತಿರುಚ್ಚಿ ಎನ್. ಶಿವ ಅವರನ್ನು ರಾಜ್ಯಸಭೆಯ ಡಿಎಂಕೆ ನಾಯಕರನ್ನಾಗಿ ನೇಮಿಸಲಾಗಿದೆ.

ಡಿಎಂಕೆ ಟ್ರೇಡ್ ಯೂನಿಯನ್ ಎಲ್‌ಪಿಎಫ್ ಪ್ರಧಾನ ಕಾರ್ಯದರ್ಶಿ ಎಂ. ಷಣ್ಮುಗಂ ಅವರು ರಾಜ್ಯಸಭೆಯಲ್ಲಿ ಉಪನಾಯಕರಾಗಿ, ಹಿರಿಯ ವಕೀಲ ಪಿ ವಿಲ್ಸನ್ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ವಿಪ್ ಆಗಿ ಮತ್ತು ಎಸ್. ಜಗತ್‌ರಕ್ಷಕನ್‌ ಅವರು ಉಭಯ ಸದನಗಳಲ್ಲಿ ಡಿಎಂಕೆ ಖಜಾಂಚಿಯಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.