ADVERTISEMENT

ಕಾನ್ಪುರ | ದೀಪದಿಂದ ಆವರಿಸಿದ ಬೆಂಕಿ: ಮೂವರು ಉಸಿರುಗಟ್ಟಿ ಸಾವು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 14:28 IST
Last Updated 1 ನವೆಂಬರ್ 2024, 14:28 IST
   

ಕಾನ್ಪುರ: ಮನೆಯಲ್ಲಿದ್ದ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದು, ಮರದ ಮಂಟಪದಲ್ಲಿ ಇರಿಸಿದ್ದ ದೀಪದಿಂದ ಉಂಟಾದ ಬೆಂಕಿ ಆವರಿಸಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಕಾಕದೇವ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಪಾಂಡು ನಗರದಲ್ಲಿ ಘಟನೆ ನಡೆದಿದೆ. ಮನೆಯಲ್ಲಿದ್ದ ಮರದ ಮಂಟಪಕ್ಕೆ ಬೆಳಿಗ್ಗೆ 3 ಗಂಟೆಯಲ್ಲಿ ಬೆಂಕಿ ತಗುಲಿದೆ. ಕುಟುಂಬದ ಸದಸ್ಯರು ದೀಪಾವಳಿ ಪೂಜೆ ನೆರವೇರಿಸಿದ್ದರು. ಮಂಟಪದಲ್ಲಿ ದೀಪ ಉರಿಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

‘ಘಟನೆ ವೇಳೆ ಉದ್ಯಮಿ ಸಂಜಯ್‌ ಶ್ಯಾಮ್‌ ದಾಸನಿ, ಪತ್ನಿ ಕನಿಕಾ ದಾಸನಿ ಮತ್ತು ಮನೆಕೆಲಸದ ಮಹಿಳೆ ಚಾಬಿ ಚೌಹಾಣ್‌ ಮಲಗಿದ್ದರು. ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ’. ಸ್ಥಳೀಯ ಅಧಿಕಾರಿಗಳು ಮೂವರವನ್ನೂ ಆಸ್ಪತ್ರೆ ಸಾಗಿಸಿದರಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾಗಿ ಪೊಲೀಸ್‌ ಉಪ ಆಯುಕ್ತ ದಿನೇಶ್‌ ತ್ರಿಪತಿ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.