ADVERTISEMENT

ಸ್ವಾತಂತ್ರ್ಯ ದಿನದಂದು ಈ ಜೈಲಿನಲ್ಲಿ ಕೈದಿಗಳಿಂದ ಕೈದಿಗಳಿಗಾಗಿ FM Radio ಆರಂಭ

ಜೈಲು ಹಕ್ಕಿಗಳಿಗಾಗಿ ಜೈಲು ಹಕ್ಕಿಗಳಿಂದಲೇ ರೇಡಿಯೊ

ಐಎಎನ್ಎಸ್
Published 13 ಆಗಸ್ಟ್ 2023, 10:07 IST
Last Updated 13 ಆಗಸ್ಟ್ 2023, 10:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲಾ ಕಾರಾಗೃಹದಲ್ಲಿ ಇನ್ಮುಂದೆ ಜೈಲು ಹಕ್ಕಿಗಳಿಗಾಗಿ ಜೈಲು ಹಕ್ಕಿಗಳಿಂದಲೇ ರೇಡಿಯೊ ಸ್ವರಗಳು ಕೇಳಿಬರಲಿವೆ.

ಹೌದು, ಕಾನ್ಪುರ ಜಿಲ್ಲಾ ಕಾರಾಗೃಹದಲ್ಲಿ ಶೀಘ್ರದಲ್ಲೇ ಎಫ್‌ಎಂ ರೇಡಿಯೊ ಕೇಂದ್ರ ಆರಂಭವಾಗಲಿದೆ ಎಂದು ಜೈಲು ಅಧೀಕ್ಷಕರು ತಿಳಿಸಿದ್ದಾರೆ. ಈ ಎಫ್‌ಎಂನಲ್ಲಿ ಜೈಲಿನ ದಿನನಿತ್ಯದ ಆಗುಹೋಗುಗಳ ಜೊತೆ, ಹೊರ ಜಗತ್ತಿನ ಸುದ್ದಿ, ಸಂಗೀತ, ಮಾಹಿತಿ, ಮನರಂಜನೆ ಕಾರ್ಯಕ್ರಮಗಳು ಕೇಳಿ ಬರಲಿವೆ.

ವಿಶೇಷವೆಂದರೆ ಕೈದಿಗಳೇ ರೇಡಿಯೊ ಜಾಕಿಗಳಾಗಿ ಕಾರ್ಯಕ್ರಮಗಳನ್ನು ಬಿತ್ತರಿಸಲು ಅವಕಾಶ ಮಾಡಿ ಕೊಡಲಾಗಿದೆ. ಕೈದಿಗಳು ಇದರಲ್ಲಿ ಪಾಲ್ಗೊಂಡು ಕಥೆ, ಕವನ, ತಮ್ಮ ವಿಶೇಷ ಪ್ರತಿಭೆಯನ್ನು ಹಂಚಿಕೊಳ್ಳಬಹುದು.

ADVERTISEMENT

ಇದೇ ಆಗಸ್ಟ್ 15 ರಂದು ಸ್ವಾಂತಂತ್ರ್ಯೋತ್ಸವದಂದು ಈ ಎಫ್‌ಎಂ ರೇಡಿಯೊ ಕೇಂದ್ರ ಆರಂಭವಾಗಲಿದೆ ಎಂದು ಜೈಲು ಅಧೀಕ್ಷಕ ಬಿ.ಡಿ ಪಾಂಡೆ ತಿಳಿಸಿದ್ದಾರೆ.

‘ಈ ರೇಡಿಯೊ ಕೇಂದ್ರದ ಮೂಲಕ ನಾವು ಕೈದಿಗಳಿಗೆ ಜೈಲಿನ ದಿನನಿತ್ಯದ ಆಗುಹೋಗುಗಳ ಜೊತೆ ಹೊರ ಜಗತ್ತಿನ ಸುದ್ದಿ, ಸಂಗೀತ, ಮಾಹಿತಿ, ಮನರಂಜನೆ ಕಾರ್ಯಕ್ರಮಗಳ ಜೊತೆಗೆ ಅವರ ಏಕತಾನತೆಯನ್ನು ಹೋಗಲಾಡಿಸಿ ಮಾನಸಿಕ ಬದಲಾವಣೆಯನ್ನು ತರಲು ಶ್ರಮಿಸುತ್ತೇವೆ’ ಎಂದು ಪಾಂಡೆ ಹೇಳಿದ್ದಾರೆ.

ಇದರ ಜೊತೆಗೆ ಕೈದಿಗಳು ಎದುರಿಸುತ್ತಿರುವ ಪ್ರಕರಣಗಳ ಲೋಕ್ ಅದಾಲತ್ ಬಗ್ಗೆ ಹಾಗೂ ಇನ್ನಿತರ ಅಗತ್ಯ ಮಾಹಿತಿಗಳನ್ನು ಬಿತ್ತರಿಸಲಾಗುತ್ತದೆ. ಫ್ರಿಕ್ವೆನ್ಸಿ ಜೈಲಿನ ಒಳಗೆ ಮಾತ್ರ ಇರಲಿದೆ. ರೇಡಿಯೊ ನಿರೂಪಕರಿಗಾಗಿ ಕೈದಿಗಳನ್ನು ಗುರುತಿಸಲಾಗಿದ್ದು ಅವರಿಗೆ ಹೊರಗಿನ ಜನಪ್ರಿಯ ರೆಡಿಯೊ ಜಾಕಿಗಳಿಂದ ತರಬೇತಿ ಕೊಡಿಸಲಾಗುತ್ತಿದೆ ಎಂದು ಪಾಂಡೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.