ADVERTISEMENT

ಕನ್ವರ್ ಯಾತ್ರೆ: UP ಸರ್ಕಾರದ ‘ಹೆಸರು ಪ್ರದರ್ಶನ’ ಆದೇಶ ಪ್ರಶ್ನಿಸಿ ಅರ್ಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2024, 11:38 IST
Last Updated 21 ಜುಲೈ 2024, 11:38 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ಲಖನೌ: ಕನ್ವರ್ ಯಾತ್ರೆ ಮಾರ್ಗದಲ್ಲಿನ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸಬೇಕು ಎಂಬ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಇಂದು (ಭಾನುವಾರ) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ನ್ಯಾಯಮೂರ್ತಿ ಹೃಷಿಕೇಶ್ ರಾಯ್ ನೇತೃತ್ವದ ಪೀಠವು ನಾಳೆ (ಸೋಮವಾರ) ಅರ್ಜಿ ವಿಚಾರಣೆ ನಡೆಸಲಿದೆ.

ಮಳಿಗೆಗಳ ಮಾಲೀಕರು ತಮ್ಮ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸಬೇಕು ಎಂಬ ಆದೇಶವನ್ನು ಆರಂಭದಲ್ಲಿ ಮುಜಾಫರ್‌ನಗರ ಮಾತ್ರ ಜಾರಿಗೊಳಿಸಲಾಗಿತ್ತು. ಬಳಿಕ ಸಿಎಂ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಈ ಆದೇಶವನ್ನು ರಾಜ್ಯದಾದ್ಯಂತ ವಿಸ್ತರಿಸಿತ್ತು.

ADVERTISEMENT

ಈಗಾಗಲೇ ಕನ್ವರ್‌ ಯಾತ್ರೆಗಾಗಿ ಮಾಡಿರುವ ಸಿದ್ಧತೆಗಳನ್ನು ಆದಿತ್ಯನಾಥ ಅವರು ಪರಿಶೀಲಿಸಿದರು ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

ಕೋವಿಡ್‌ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಕನ್ವರ್‌ ಯಾತ್ರೆ ನಡೆದಿರಲಿಲ್ಲ. ಈ ಯಾತ್ರೆಯ ವೇಳೆ ಶಿವಭಕ್ತರು ಗಂಗಾ ಜಲವನ್ನು ಸಂಗ್ರಹಿಸಿ ಅದನ್ನು ದೇಗುಲಕ್ಕೆ ಕೊಂಡೊಯ್ದು ಸಮರ್ಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.