ADVERTISEMENT

ಹರಿದ್ವಾರದಲ್ಲಿ ಘರ್ಷಣೆ | ಚಾಲಕನಿಗೆ ಥಳಿತ; ಇ-ರಿಕ್ಷಾ ಧ್ವಂಸಗೊಳಿಸಿದ ಯಾತ್ರಿಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜುಲೈ 2024, 10:40 IST
Last Updated 24 ಜುಲೈ 2024, 10:40 IST
<div class="paragraphs"><p>ರಿಕ್ಷಾವನ್ನು&nbsp;ಕಾವಡ್‌ ಯಾತ್ರಿಕರು ಧ್ವಂಸಗೊಳಿಸುತ್ತಿರುವ ದೃಶ್ಯ</p></div>

ರಿಕ್ಷಾವನ್ನು ಕಾವಡ್‌ ಯಾತ್ರಿಕರು ಧ್ವಂಸಗೊಳಿಸುತ್ತಿರುವ ದೃಶ್ಯ

   

–ಪಿಟಿಐ ಟ್ಚಿಟರ್ ಚಿತ್ರ

ಹರಿದ್ವಾರ (ಉತ್ತರಾಖಂಡ): ಹರಿದ್ವಾರದ ಮಂಗ್‌ಲೌರ್‌ನಲ್ಲಿ ಕಾವಡ್‌ ಯಾತ್ರಿಕರು ಸಾಗುತ್ತಿದ್ದ ಮಾರ್ಗದಲ್ಲಿ ಯಾತ್ರಿಕರೊಬ್ಬರಿಗೆ ಇ-ರಿಕ್ಷಾ ಡಿಕ್ಕಿ ಹೊಡೆದಿರುವ ಘಟನೆಗೆ ಸಂಬಂಧಿಸಿ ಸಂಘರ್ಷ ನಡೆದಿದೆ.

ADVERTISEMENT

ಅಪಘಾತದಿಂದ ಆಕ್ರೋಶಗೊಂಡ ಇತರೆ ಯಾತ್ರಿಕರು ಚಾಲಕನನ್ನು ಮನಸೋಇಚ್ಛೆ ಥಳಿಸಿದ್ದಾರೆ. ಬಳಿಕ ಇ-ರಿಕ್ಷಾವನ್ನು ಧ್ವಂಸಗೊಳಿಸಿದ್ದಾರೆ ಎಂದು ‘ಪಿಟಿಐ’ ವರದಿ ಮಾಡಿದೆ.

‘ರಸ್ತೆಯಲ್ಲಿ ಸಾಗುತ್ತಿದ್ದಾಗ ಇ-ರಿಕ್ಷಾ ಆಕಸ್ಮಿಕವಾಗಿ ಭೋಲೆಗೆ (ಯಾತ್ರಾರ್ಥಿ) ಡಿಕ್ಕಿ ಹೊಡೆಯಿತು. ಆದರೆ, ಘಟನೆಯಲ್ಲಿ ಭೋಲೆಗೆ ಯಾವುದೇ ರೀತಿಯ ಗಾಯವಾಗಿರಲಿಲ್ಲ. ಇದರ ಹೊರತಾಗಿಯೂ ಯಾತ್ರಿಕರು ಮತ್ತು ಸ್ಥಳೀಯರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಇ-ರಿಕ್ಷಾವನ್ನು ಧ್ವಂಸಗೊಳಿಸಿದ್ದಾರೆ ಎಂದು ರಿಕ್ಷಾ ಚಾಲಕ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಲಾಗುತ್ತಿದೆ ಎಂದು ಹರಿದ್ವಾರದ ಎಸ್‌ಪಿ ಪ್ರಮೋದ್ ದೋಭಾಲ್ ಹೇಳಿದ್ದಾರೆ.

‘ಕಾವಡ್‌ ಯಾತ್ರೆ’ಯ ಮಾರ್ಗಗಳಲ್ಲಿರುವ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರು ಮತ್ತು ಇತರ ವಿವರಗಳನ್ನು ಮಳಿಗೆಗಳ ಮುಂದೆ ಪ್ರದರ್ಶಿಸುವಂತೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಹೊರಡಿಸಿದ್ದ ನಿರ್ದೇಶನಗಳಿಗೆ ಸುಪ್ರೀಂ ಕೋರ್ಟ್ ಈಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.