ADVERTISEMENT

ಸುಪ್ರೀಂ ಐತಿಹಾಸಿಕ ತೀರ್ಪು; ದೇಶಕ್ಕೆ ಮತ್ತೆ ತನ್ನ ಉಸಿರು ಮರಳಿದೆ– ಕರಣ್‌ ಜೋಹರ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 9:53 IST
Last Updated 6 ಸೆಪ್ಟೆಂಬರ್ 2018, 9:53 IST
ಸೆಕ್ಷನ್‌ 377 ಕುರಿತು ಸುಪ್ರೀಂ ತೀರ್ಪು
ಸೆಕ್ಷನ್‌ 377 ಕುರಿತು ಸುಪ್ರೀಂ ತೀರ್ಪು   

ಬೆಂಗಳೂರು: ಸೆಕ್ಷನ್‌ 377ರ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಬಾಲಿವುಡ್‌ ನಟರು, ನಿರ್ದೇಶಕರು ತೀರ್ಪು ಸ್ವಾಗತಿಸಿ ಟ್ವೀಟಿಸಿದ್ದಾರೆ.

ದೇಶಕ್ಕೆ ಮತ್ತೆ ತನ್ನ ಉಸಿರು ಮರಳಿದೆ. ಸಲಿಂಗಕಾಮ ಅಪರಾಧ ಮುಕ್ತಗೊಳಿಸಿರುವುದು ಸಮಾನ ಹಕ್ಕು ಮತ್ತು ಮಾನವೀಯತೆಯ ಗೆಲುವಾಗಿದೆ. ಇದೊಂದು ಐತಿಹಾಸಿಕ ತೀರ್ಪು ಎಂದು ನಿರ್ದೇಶಕ ಕರಣ್‌ ಜೋಹರ್‌ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಎಲ್‌ಜಿಬಿಟಿಕ್ಯು ಸಮುದಾಯದ ಬೆಂಬಲಕ್ಕೆ ನಿಂತು ಸಂತಸ ವ್ಯಕ್ತಪಡಿಸಿರುವ ಸೋನಮ್‌ ಕಪೂರ್‌, ಮುಂದೊಂದು ದಿನ ಯಾವುದೇ ಹಣೆಪಟ್ಟಿಗಳಲ್ಲಿದೆ ಎಲ್ಲರೂ ಆದರ್ಶನೀಯ ಸಾಗಿಸಬಹುದು ಎಂದಿದ್ದರೆ. ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಅರ್ಪಿಸಿರುವ ನಟ, ನಿರ್ದೇಶಕ ಆಮಿರ್‌ ಖಾನ್‌, ’ನ್ಯಾಯಾಂಗ ತನ್ನ ಕರ್ತವ್ಯ ನಿರ್ವಹಿಸಿದೆ ಮತ್ತು ನಾವು ನಮ್ಮದನ್ನು ನಿರ್ವಹಿಸಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ದಿಯಾ ಮಿರ್ಜಾ, ಅಭಿಷೇಕ್‌ ಬಚ್ಚನ್‌ ಸೇರಿದಂತೆ ಅನೇಕರು ಸಮಾನ ಹಕ್ಕುಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.