ADVERTISEMENT

ಕಾರ್ಗಿಲ್ ವಿಜಯ್‌ ದಿವಸ್‌: ಈ ದಿನದ ಬಗ್ಗೆ ತಿಳಿಯಲೇಬೇಕಾದ 10 ಅಂಶಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2023, 4:43 IST
Last Updated 26 ಜುಲೈ 2023, 4:43 IST
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.   

ಬೆಂಗಳೂರು: ಕಾರ್ಗಿಲ್‌ ಯುದ್ಧದಲ್ಲಿ ವಿಜಯ ಸಾಧಿಸಿದ 24ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಹುತಾತ್ಮ ಯೋಧರಿಗೆ ದೇಶದಾದ್ಯಂತ ಗೌರವ ಸಲ್ಲಿಸಲಾಗುತ್ತಿದೆ.

ಈ ದಿನದ ಬಗ್ಗೆ ತಿಳಿಯಲೇಬೇಕಾದ 10 ಅಂಶಗಳು ಇಲ್ಲಿವೆ...

  • 1 ಭಾರತೀಯ ಸೇನೆಯು ಜುಲೈ 26, 1999 ರಂದು ಪಾಕಿಸ್ತಾನವನ್ನು ಸೋಲಿಸಿತ್ತು. ಅಂದಿನಿಂದ, ಭಾರತೀಯ ಸಶಸ್ತ್ರ ಪಡೆಗಳ ಹೆಮ್ಮೆ ಮತ್ತು ಧೈರ್ಯವನ್ನು ಸ್ಮರಿಸುವುದಕ್ಕಾಗಿ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.

  • 2 ಪಾಕಿಸ್ತಾನ ಸೇನೆಯು ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದೊಳಗೆ ನುಗ್ಗಿ ಆಯಕಟ್ಟಿನ ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿದ್ದರಿಂದ ಕಾರ್ಗಿಲ್ ಯುದ್ಧ ನಡೆಯಿತು. ಕಾರ್ಗಿಲ್ ಯುದ್ಧದಲ್ಲಿ 500 ಕ್ಕೂ ಹೆಚ್ಚು ಭಾರತೀಯ ಸೈನಿಕರು ಹುತಾತ್ಮರಾದರು.

    ADVERTISEMENT
  • 3 ಮೇ 1999 ರಲ್ಲಿ ಒಳನುಸುಳುವಿಕೆಯನ್ನು ಮೊದಲು ಪತ್ತೆ ಹಚ್ಚಲಾಯಿತು, ಆದರೆ, ಆ ಸಮಯದಲ್ಲಿ ಒಳನುಗ್ಗುತ್ತಿರುವವರು ಉಗ್ರಗಾಮಿಗಳು ಅಥವಾ ಭಯೋತ್ಪಾದಕರು ಇರಬಹುದು. ಆದರೆ ಪಾಕಿಸ್ತಾನದ ಸೇನಾ ಪಡೆಗಳಲ್ಲ ಎಂದು ಭಾವಿಸಲಾಗಿತ್ತು.

  • 4 ಮೇ 9 ರಂದು, ಪಾಕಿಸ್ತಾನವು ಹೆಚ್ಚಿನ ಒಳನುಸುಳುವಿಕೆಗೆ ಸಹಾಯ ಮಾಡಲು ಭಾರತದ ಕಡೆಗೆ ಭಾರೀ ಶೆಲ್ ದಾಳಿಯನ್ನು ಪ್ರಾರಂಭಿಸಿತು.

  • 5 ಭಾರತೀಯ ಸೇನೆಯು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್-ದ್ರಾಸ್ ಸೆಕ್ಟರ್ ಎತ್ತರದ ಪ್ರದೇಶ ಯುದ್ಧಭೂಮಿಯಾಯಿತು.

  • 6 ಮೇ ಅಂತ್ಯದ ವೇಳೆಗೆ, ಭಾರತೀಯ ವಾಯುಪಡೆಯ ಸೀಮಿತ ದಾಳಿಯನ್ನು ಪ್ರಾರಂಭಿಸಿತು. ಈ ಸಂದರ್ಭ ಐಎಎಫ್ ತನ್ನ ಎರಡು ಯುದ್ಧ ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಕಳೆದುಕೊಂಡಿತು. ಬಳಿಕ, ಪಾಕಿಸ್ತಾನ ಸೇನೆಯು ಆಕ್ರಮಿಸಿಕೊಂಡಿರುವ ಪ್ರಮುಖ ಸ್ಥಾನಗಳನ್ನು ಹಿಂಪಡೆಯಲು ಜೂನ್ ಮತ್ತು ಜುಲೈನಲ್ಲಿ ಭಾರತೀಯ ಸೇನೆಯ ದಾಳಿಯನ್ನು ಹೆಚ್ಚಿಸಲಾಯಿತು.

  • 7 ಕೆಲವು ವಾರಗಳಲ್ಲಿ, ಕಾರ್ಗಿಲ್‌ನ ಎತ್ತರ ಪ್ರದೇಶವನ್ನು ಮರಳಿ ಪಡೆಯಲು ಭಾರತೀಯ ಸೈನಿಕರು ವೀರಾವೇಶದ ಮೂಲಕ ಯುದ್ಧ ನಡೆಸಿದರು. ಆಗ, ಗಡಿ ನಿಯಂತ್ರಣ ರೇಖೆಯನ್ನು ದಾಟಿ ಒಳನುಗ್ಗಿದ್ದು ಪಾಕಿಸ್ತಾನದ ಸೇನೆಯೇ ಎಂಬುದು ಸ್ಪಷ್ಟವಾಯಿತು.

  • 8 ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವು ಮಿಲಿಟರಿ ಮತ್ತು ರಾಜತಾಂತ್ರಿಕ ಪ್ರಕ್ರಿಯೆ ಪ್ರಾರಂಭಿಸಿತು, ಪಾಕಿಸ್ತಾನಿ ನುಸುಳುಕೋರರನ್ನು ವಶಕ್ಕೆ ಪಡೆದ ಸೇನೆಯು ಎತ್ತರದ ಪ್ರದೇಶದಿಂದ ಕೆಳಗೆ ತಳ್ಳಿತು.

  • 9 ಟೈಗರ್ ಹಿಲ್ ಯುದ್ಧವು ಮಹತ್ವದ ತಿರುವು ಕೊಟ್ಟಿತು. ಇದು ಕಾರ್ಗಿಲ್-ದ್ರಾಸ್ ವಲಯದ ಅತಿ ಎತ್ತರದ ಶಿಖರವಾಗಿದೆ. 11 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದ ನಂತರ ಭಾರತೀಯ ಸೇನೆ ಟೈಗರ್ ಹಿಲ್ ಅನ್ನು ಮರಳಿ ವಶಪಡಿಸಿಕೊಂಡಿತು.

  • 10 ಭಾರತವು ಜುಲೈ 26, 1999 ರ ಹೊತ್ತಿಗೆ ಎಲ್ಲಾ ಶಿಖರ ಪ್ರದೇಶಗಳನ್ನು ಪುನಃ ವಶಪಡಿಸಿಕೊಂಡಿತು, ಕಾರ್ಗಿಲ್ ಸಂಘರ್ಷವನ್ನು ಕೊನೆಗೊಳಿಸಿತು.

1999ರ ಈ ದಿನದಂದು, ಕಾರ್ಗಿಲ್ ಸಂಘರ್ಷ ಎಂದೂ ಕರೆಯಲ್ಪಡುವ ಕಾರ್ಗಿಲ್ ಯುದ್ಧವು ಅಧಿಕೃತವಾಗಿ ಕೊನೆಗೊಂಡಿತ್ತು. ಪಾಕಿಸ್ತಾನ ನುಸುಳುಕೋರರು ವಶಪಡಿಸಿಕೊಂಡಿದ್ದ ಪರ್ವತ ಶ್ರೇಣಿಗಳನ್ನು ಭಾರತೀಯ ಸೈನಿಕರು ಯಶಸ್ವಿಯಾಗಿ ಮರು ವಶಕ್ಕೆ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.