ADVERTISEMENT

ಕರ್ನಾಟಕ, ಹಿಮಾಚಲ ಪ್ರದೇಶ, ಅಸ್ಸಾಂಗೆ ಅತಿ ಹೆಚ್ಚು ನೆರೆ ಪರಿಹಾರ: ಕೇಂದ್ರ ಸರ್ಕಾರ

ಪಿಟಿಐ
Published 7 ಆಗಸ್ಟ್ 2024, 11:31 IST
Last Updated 7 ಆಗಸ್ಟ್ 2024, 11:31 IST
<div class="paragraphs"><p>ರಾಜ್ಯಸಭೆ </p></div>

ರಾಜ್ಯಸಭೆ

   

ನವದೆಹಲಿ: 2022–2024ರ ನಡುವಿನ ಎರಡು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ(ಎನ್‌ಡಿಆರ್‌ಎಫ್‌) ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ಅಧಿಕ ಪ್ರಮಾಣದ ಪರಿಹಾರದ ಹಣ ನೀಡಲಾಗಿದೆ ಎಂದು ಬುಧವಾರ ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ನೈಸರ್ಗಿಕ ವಿಕೋಪದಿಂದ ತತ್ತರಿಸಿರುವ ಜನರಿಗೆ ಪರಿಹಾರ ಮತ್ತು ಪುನರ್ವಸತಿಗಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಅದು ತಿಳಿಸಿದೆ.

ADVERTISEMENT

2022-24ರ ಅವಧಿಯಲ್ಲಿ ಕೇಂದ್ರದ ಉನ್ನತಮಟ್ಟದ ಸಮಿತಿಯು ನೆರೆ ಮತ್ತು ಭೂಕುಸಿತ ಸಂಬಂಧಿಸಿದ ಪರಿಹಾರ ಒದಗಿಸಲು ಕರ್ನಾಟಕಕ್ಕೆ ಅತ್ಯಧಿಕ ₹941 ಕೋಟಿ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂಗೆ ಕ್ರಮವಾಗಿ ₹873 ಮತ್ತು ₹594 ಕೋಟಿ ಒದಗಿಸಲು ಅನುಮೋದಿಸಿತ್ತು ಎಂದು ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆಗೆ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಎನ್‌ಡಿಆರ್‌ಎಫ್ ನಿಧಿಯಿಂದ ಕರ್ನಾಟಕಕ್ಕೆ ₹ 939 ಕೋಟಿ, ಹಿಮಾಚಲ ಪ್ರದೇಶಕ್ಕೆ ₹812 ಕೋಟಿ ಮತ್ತು ಅಸ್ಸಾಂಗೆ ₹160 ನೀಡಲಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ತಮಿಳುನಾಡಿಗೆ ₹276 ಕೋಟಿ, ಸಿಕ್ಕಿಂಗೆ ₹267 ಕೋಟಿ, ನಾಗಾಲ್ಯಾಂಡ್‌ಗೆ ₹68 ಕೋಟಿಯನ್ನು ಪರಿಹಾರ ಮತ್ತು ಭೂಕುಸಿತ ನಿರ್ವಹಣೆಗಾಗಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇವೇಳೆ, ಮಣಿಪುರದಲ್ಲಿ ರೇಮಲ್ ಚಂಡಮಾರುತದ ಪರಿಣಾಮ ಮತ್ತು ಕೇರಳ ಭೂಕುಸಿತದ ಕುರಿತಂತೆ ಪರಿಶೀಲನೆ ನಡೆಸಿ ವರದಿ ನೀಡಲು ಕೇಂದ್ರ ತಂಡ ರಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.