ADVERTISEMENT

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಷಯ: ಕಂಪನಿಗಳನ್ನು ಆಹ್ವಾನಿಸಿದ ಕೇರಳ ಸಚಿವ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 12:48 IST
Last Updated 18 ಜುಲೈ 2024, 12:48 IST
<div class="paragraphs"><p>ಪಿ. ರಾಜೀವ್</p></div>

ಪಿ. ರಾಜೀವ್

   

ತಿರುವನಂತಪುರ: ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸರ್ಕಾರದ ನಡೆಗೆ ಉದ್ಯಮ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಕೇರಳ ಸಚಿವ ಪಿ. ರಾಜೀವ್ ತಮ್ಮ ರಾಜ್ಯಕ್ಕೆ ಕಂಪನಿ ಹಾಗೂ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ.

#KeralaCalling ಹ್ಯಾಷ್‌ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸಿಕೊಂಡಿರುವ ರಾಜೀವ್, ‘ಕೇರಳದಲ್ಲಿ ಹೂಡಿಕೆ ಮಾಡಿ. ಉದ್ಯೋಗಿಗಳ ಪ್ರತಿಭೆ ಮತ್ತು ಅರ್ಹತೆ ಮಾತ್ರವೇ ನೇಮಕಾತಿಗೆ ಮಾನದಂಡಗಳು. ಕೇರಳವನ್ನು ಆಯ್ಕೆ ಮಾಡಲು ಇದುವೇ ಸಕಾಲ. ಸಾಕಷ್ಟು ಪ್ರತಿಭೆಗಳ ತಾಣ, ಅದ್ಭುತ ಹವೆ ಹಾಗೂ ಸಮಸ್ಯೆ ಇಲ್ಲದ ಪರಿಸರ, ಸಾಕಷ್ಟು ಅವಕಾಶಗಳು ಕೇರಳದಲ್ಲಿವೆ’ ಎಂದಿದ್ದಾರೆ.

ADVERTISEMENT

‘ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ 75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಕಚೇರಿಯ ಎಕ್ಸ್ ಪ್ರಕಟಣೆ ಬುಧವಾರ ತಿಳಿಸಿತ್ತು. ಆದರೆ ಸಂಜೆಯ ಹೊತ್ತಿಗೆ ಇದನ್ನು ಹಿಂಪಡೆಯಲಾಯಿತು.

ಇದನ್ನು ಬಳಸಿಕೊಂಡ ರಾಜೀವ್, ಎಕ್ಸ್‌ ಮೂಲಕ ಕಂಪನಿಗಳನ್ನು ಆಹ್ವಾನಿಸಿದ್ದಾರೆ. ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾದಾಗಲೂ, ರಾಜೀವ್ ಅವರು ಇಂತದ್ದೇ ಪ್ರಯತ್ನ ನಡೆಸಿದ್ದರು. 

ಐಟಿ ಹಾಗೂ ಐಟಿ ಪೂರಕ ಕಂಪನಿಗಳಲ್ಲಿ ಕೆಲವು ಕೇರಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಿಂದ ಕೇರಳಕ್ಕೆ ₹20 ಸಾವಿರ ಕೋಟಿ ಆದಾಯ ಸಿಗುತ್ತಿದೆ. ಕರ್ನಾಟಕದಲ್ಲಿ ಈ ಕ್ಷೇತ್ರದಿಂದ ಸಿಗುತ್ತಿರುವ ಆದಾಯ ಪ್ರಮಾಣ ₹3 ಲಕ್ಷ ಕೋಟಿ ಎಂದು ದಾಖಲೆಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.