ADVERTISEMENT

ಸಾವರ್ಕರ್‌ ಪಠ್ಯ ಕೈಬಿಟ್ಟ ಕರ್ನಾಟಕ ಸರ್ಕಾರ: ಉದ್ಧವ್‌ ನಿಲುವೇನು ಎಂದ ಬಿಜೆಪಿ

ಪಿಟಿಐ
Published 16 ಜೂನ್ 2023, 13:03 IST
Last Updated 16 ಜೂನ್ 2023, 13:03 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಮುಂಬೈ: ‘ಕರ್ನಾಟಕದಲ್ಲಿ ಶಾಲಾ ಪಠ್ಯದಿಂದ ಹಿಂದುತ್ವ ಸಿದ್ಧಾಂತ ಪ್ರತಿಪಾದಕ ವಿ.ಡಿ. ಸಾವರ್ಕರ್‌ ಹಾಗೂ ಆರ್‌ಎಸ್‌ಎಸ್‌ ಸ್ಥಾಪಕ ಹೆಡಗೇವಾರ್ ಅವರ ಪಠ್ಯವನ್ನು ಕೈಬಿಟ್ಟಿರುವ ಕಾಂಗ್ರೆಸ್‌ ಸರ್ಕಾರದ ಕ್ರಮದ ಬಗ್ಗೆ ಶಿವಸೇನಾ (ಉದ್ಧವ್‌ ಬಣ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ನಿಲುವೇನು’ ಎಂದು ಬಿಜೆಪಿ ನಾಯಕರು ಶುಕ್ರವಾರ ಪ್ರಶ್ನಿಸಿದ್ದಾರೆ.

6ರಿಂದ 10ನೇ ತರಗತಿವರೆಗಿನ ಕನ್ನಡ ಹಾಗೂ ಸಮಾಜ ವಿಜ್ಞಾನ ಪಠ್ಯದಿಂದ ಸಾವರ್ಕರ್‌ ಹಾಗೂ ಹೆಡಗೇವಾರ್‌ ಅವರ ಪಠ್ಯವನ್ನು ಕೈಬಿಟ್ಟು, ಸಾವಿತ್ರಿ ಬಾಯಿ ಫುಲೆ, ಇಂದಿರಾ ಗಾಂಧಿ ಅವರಿಗೆ ನೆಹರೂ ಅವರು ಬರೆದ ಪತ್ರ ಹಾಗೂ ಅಂಬೇಡ್ಕರ್‌ ಅವರ ಕವಿತೆಗಳನ್ನು ಸೇರಿಸಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಎಂದಿದೆ.

‘ಸಾವರ್ಕರ್ ಹಾಗೂ ಹೆಡಗೇವಾರ್‌ ಅವರನ್ನು ಪಠ್ಯದಿಂದ ತೆಗೆದು ಹಾಕಬಹುದು. ಆದರೆ, ಜನರ ಹೃದಯದಿಂದಲ್ಲ. ಕರ್ನಾಟಕ ಮಾಡೆಲ್‌ ಅನ್ನು ಮಹಾರಾಷ್ಟ್ರದಲ್ಲಿ ಅನುಸರಿಸಲು ವಿರೋಧ ಪಕ್ಷಗಳು ಬಯಸಿವೆ. ಆದ್ದರಿಂದ, ಈ ಎಲ್ಲ ಬೆಳವಣಿಗಳ ಬಗ್ಗೆ ಉದ್ಧವ್‌ ಅವರ ನಿಲುವೇನು’ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಪ್ರಶ್ನಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.