ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 27 ಅಕ್ಟೋಬರ್‌ 2023

ಪ್ರಜಾವಾಣಿ ವಿಶೇಷ
Published 27 ಅಕ್ಟೋಬರ್ 2023, 15:30 IST
Last Updated 27 ಅಕ್ಟೋಬರ್ 2023, 15:30 IST
   

ರಾಜ್ಯ, ದೇಶ, ವಿದೇಶಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್‌ಗೆ ಷರತ್ತುಬದ್ಧ ಜಾಮೀನು

ಹುಲಿ ಉಗುರು ಒಳಗೊಂಡ ಲಾಕೆಟ್ ಧರಿಸಿದ್ದ ಆರೋಪದಡಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವರ್ತೂರು ಸಂತೋಷ್ (34) ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2ನೇ ಹೆಚ್ಚುವರಿ ಎಸಿಜೆಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ADVERTISEMENT

ಎರಡುವರೆ ವರ್ಷಗಳ ಬಳಿಕ ಡಿ.ಕೆ. ಶಿವಕುಮಾರ್ ಸಿಎಂ: ಶಾಸಕ ರವಿಕುಮಾರ್ ಗಣಿಗ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡುವರೆ ವರ್ಷಗಳಾದ ಬಳಿಕ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ ಎಂದು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿಕುಮಾರ್‌ ಗಣಿಗ ಹೇಳಿದರು.

ನ್ಯೂಸ್‌ ಕ್ಲಿಕ್‌: ಜಾಮೀನಿಗಾಗಿ ದೆಹಲಿ ನ್ಯಾಯಾಲಯ ಮೊರೆ ಹೋದ ಅಮಿತ್ ಚಕ್ರವರ್ತಿ

ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ‘ನ್ಯೂಸ್‌ಕ್ಲಿಕ್‌’ ಸುದ್ದಿಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರು ದೆಹಲಿಯ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಅನುಮತಿ ಇಲ್ಲದೆ ಗೈರು: 4 ತಿಂಗಳಲ್ಲಿ 2,081 ಶಿಕ್ಷಕರ ವೇತನ ಕಡಿತ

ಬಿಹಾರದಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಬೋಧನೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ 22 ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಮತ್ತು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆಯೇ ಗೈರುಹಾಜರಾಗಿದ್ದ 2,081 ಶಿಕ್ಷಕರ ವೇತನವನ್ನು ಕಡಿತಗೊಳಿಸಲಾಗಿದೆ.

ಅಸ್ಸಾಂ: 2ನೇ ಮದುವೆಗೆ ಸರ್ಕಾರಿ ನೌಕರರಿಗೆ ಪೂರ್ವಾನುಮತಿ ಕಡ್ಡಾಯ- ಹಿಮಂತಾ

ಹಿಮಂತಾ ಬಿಸ್ವಾ ಶರ್ಮಾ

 ‘ತಮ್ಮ ಧರ್ಮದಲ್ಲಿ ಅವಕಾಶ ಇದ್ದರೂ ರಾಜ್ಯದ ಸರ್ಕಾರಿ ನೌಕರರು ಎರಡನೇ ಮದುವೆಯಾಗುವ ಪೂರ್ವದಲ್ಲಿ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಶರ್ಮಾ ಶುಕ್ರವಾರ ಹೇಳಿದ್ದಾರೆ.

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಬಿಸಿ ನಾಯಕ ಸಿ.ಎಂ: ಅಮಿತ್ ಶಾ

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ನಾಯಕನನ್ನು ಮುಖ್ಯಮಂತ್ರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. 

ಹಮಾಸ್‌ನ ಐವರು ಕಮಾಂಡರ್‌ಗಳ ಹತ್ಯೆ: ಇಸ್ರೇಲ್‌ ರಕ್ಷಣಾ ಪಡೆ ಹೇಳಿಕೆ

ಗಾಜಾಪಟ್ಟಿಯಲ್ಲಿ ನಡೆಸಿದ ದಾಳಿ ವೇಳೆ ಹಮಾಸ್‌ನ ಐವರು ಹಿರಿಯ ಕಮಾಂಡರ್‌ಗಳು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್‌ ರಕ್ಷಣಾ ಪಡೆ (ಐಡಿಎಫ್‌) ಹೇಳಿದೆ. 

ನೀಟ್‌ ವಿರೋಧಿ ಮಸೂದೆಗೆ ಒಪ್ಪಿಗೆ ನೀಡಲು ರಾಷ್ಟ್ರಪತಿಗೆ ಮನವಿ- ಸ್ಟಾಲಿನ್

ನೀಟ್ ವಿರೋಧಿ ಮಸೂದೆಗೆ ಅನುಮೋದನೆ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶುಕ್ರವಾರ ಒತ್ತಾಯಿಸಿದ್ದಾರೆ.

ಪೆಟ್ರೋಲ್‌ ಬಾಂಬ್‌ ಪ್ರಕರಣ: ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಬಿಡುಗಡೆ

 ತಮಿಳುನಾಡಿನ ರಾಜಭವನದ ಮುಖ್ಯ ದ್ವಾರದ ಮುಂಭಾಗ ಪೆಟ್ರೋಲ್‌ ಬಾಂಬ್‌ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಯನ್ನು ಪೊಲೀಸ್‌ ಮಹಾನಿರ್ದೇಶಕ ಶಂಕರ್‌ ಜೀವಲ್‌ ಮತ್ತು ಗ್ರೇಟರ್‌ ಚೆನ್ನೈ ಪೊಲೀಸ್‌ ಆಯುಕ್ತ ಸಂದೀಪ್‌ ರಾಯ್‌ ರಾಥೋಡ್‌ ‌ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಚೀನಾ ಮಾಜಿ ಪ್ರಧಾನಿ ಲಿ ಕೇಜಿಯಾಂಗ್ ನಿಧನ

ಚೀನಾದ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಲಿ ಕೇಜಿಯಾಂಗ್ ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷವಾಗಿತ್ತು. ಚೀನಾದ ಕಮ್ಯುನಿಸ್ಟ್‌ ಪಾರ್ಟಿ (ಸಿಪಿಐ) ಉನ್ನತ ಸ್ಥಾನಕ್ಕೆ ಹಿಂದೊಮ್ಮೆ ಷಿ ಜಿನ್‌ಪಿಂಗ್‌ರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.