ADVERTISEMENT

₹ 1,11,11,111: ಬಿಷ್ಣೋಯಿ ಎನ್‌ಕೌಂಟರ್‌ಗೆ ಬಹುಮಾನ ಘೋಷಿಸಿದ ಕರ್ಣಿ ಸೇನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2024, 10:10 IST
Last Updated 22 ಅಕ್ಟೋಬರ್ 2024, 10:10 IST
<div class="paragraphs"><p>ಲಾರೆನ್ಸ್‌ ಬಿಷ್ಣೋಯಿ ಮತ್ತು&nbsp;ರಾಜ್‌ ಶೇಖಾವತ್</p></div>

ಲಾರೆನ್ಸ್‌ ಬಿಷ್ಣೋಯಿ ಮತ್ತು ರಾಜ್‌ ಶೇಖಾವತ್

   

ನವದೆಹಲಿ: ಬಂಧಿತ ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯಿ ಎನ್‌ಕೌಂಟರ್ ಮಾಡುವ ಪೊಲೀಸ್‌ ಅಧಿಕಾರಿಗೆ ಬಹುಮಾನವಾಗಿ ₹ 1,11,11,111 ನೀಡುವುದಾಗಿ ಕ್ಷತ್ರಿಯ ಕರ್ಣಿ ಸೇನೆ ಘೋಷಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ವಿಡಿಯೊವೊಂದು ಹರಿದಾಡುತ್ತಿದ್ದು, ರಜಪೂತ ರಾಷ್ಟ್ರೀಯ ಕರ್ಣಿ ಸೇನೆ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಗೆ ಪ್ರತೀಕಾರವಾಗಿ ಈ ಬಹುಮಾನ ಘೋಷಿಸಲಾಗಿದೆ ಎಂದು ಸೇನೆ ತಿಳಿಸಿದೆ.

ADVERTISEMENT

‘ನಮ್ಮ ನಾಯಕ ಗೊಗಮೆಡಿ ಹತ್ಯೆಗೆ ಲಾರೆನ್ಸ್‌ ಬಿಷ್ಣೋಯಿ ಕಾರಣ. ಆತನ ಎನ್‌ಕೌಂಟರ್‌ ಮಾಡುವ ಪೊಲೀಸ್ ಅಧಿಕಾರಿಗೆ ಒಂದು ಕೋಟಿ ಹನ್ನೊಂದು ಲಕ್ಷದ ಹನ್ನೊಂದು ಸಾವಿರದ ನೂರಾ ಹನ್ನೊಂದು ರೂಪಾಯಿ ನೀಡುತ್ತೇವೆ’ ಎಂದು ಕ್ಷತ್ರಿಯ ಕರ್ಣಿ ಸೇನೆ ಅಧ್ಯಕ್ಷ ರಾಜ್‌ ಶೇಖಾವತ್ ವಿಡಿಯೊದಲ್ಲಿ ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಗೊಗಮೆಡಿ ಅವರ ಹತ್ಯೆ ನಡೆದಿತ್ತು. ಹತ್ಯೆಯ ಹೊಣೆಯನ್ನು ಬಿಷ್ಣೋಯಿ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ರೋಹಿತ್ ಗೋಡಾರಾ ಹೊತ್ತುಕೊಂಡಿದ್ದ. ಆದರೆ, ಆತ ಹೆಸರು ಬದಲಾಯಿಸಿಕೊಂಡು ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಅಕ್ಟೋಬರ್ 12ರಂದು ನಡೆದ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆಯ ಹೊಣೆಯನ್ನು ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿದ್ದು, ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಅವರಿಗೂ ಜೀವ ಬೆದರಿಕೆ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.