ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಜಾರಿ ನಿರ್ದೇಶನಾಲಯ (ಇಡಿ) ಎದುರು ಶನಿವಾರ ಹಾಜರಾಗಿದ್ದಾರೆ.
2011ರಲ್ಲಿ ಚೀನಾದ ಕೆಲವರಿಗೆ ವಿಸಾ ನೀಡಲು ಕಿಕ್‌ಬ್ಯಾಕ್ ರೂಪದಲ್ಲಿ ₹50 ಲಕ್ಷ ಪಡೆದ ಆರೋಪ ಕಾರ್ತಿ ಅವರ ಮೇಲಿದೆ.
ಕಾರ್ತಿ ಅವರೊಂದಿಗೆ ವೇದಾಂತ ಸಮೂಹದ ಹಿರಿಯ ಅಧಿಕಾರಿ ಎಸ್. ಭಾಸ್ಕರರಾಮನ್ ಅವರಿಗೂ ಈ ಹಣ ಸಂದಾಯವಾಗಿದೆ ಎಂದು ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಈ ಪ್ರಕರಣವನ್ನು ಆಧರಿಸಿ ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.