ADVERTISEMENT

ಕರುಣಾನಿಧಿ ಅಂತಿಮ ದರ್ಶನ: ನೂಕುನುಗ್ಗಲಿಗೆ ಇಬ್ಬರು ಸಾವು, 30 ಮಂದಿಗೆ ಗಾಯ 

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 9:51 IST
Last Updated 8 ಆಗಸ್ಟ್ 2018, 9:51 IST
ಚಿತ್ರ: ಎಎನ್‌ಐ ಟ್ವಿಟರ್‌
ಚಿತ್ರ: ಎಎನ್‌ಐ ಟ್ವಿಟರ್‌   

ಚೆನ್ನೈ:ಇಲ್ಲಿನ ರಾಜಾಜಿ ಹಾಲ್‌ನಲ್ಲಿರುವತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಉಂಟಾದನೂಕು ನುಗ್ಗಲಿಗೆ ಇಬ್ಬರುಮೃತಪಟ್ಟಿದ್ದಾರೆ.

ಇದೇ ವೇಳೆ 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅವರನ್ನು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂತಿಮ ದಶರ್ನಕ್ಕಾಗಿ ರಾಜಾಜಿ ಹಾಲ್‌ನ ಹೊರಗೆಒಂದು ಲಕ್ಷ ಮಂದಿ ಸೇರಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆ ಹಾಲ್‌ನ ಬಾಗಿಲನ್ನು ಬಂದ್‌ ಮಾಡಲಾಗಿದೆ.


ಮರೀನಾ ಬೀಚ್‌ನಲ್ಲಿ ಕರುಣಾನಿಧಿ ಅವರ ಅಂತ್ಯ ಸಂಸ್ಕಾರನಡೆಯಲಿದ್ದು, ಎಲ್ಲಾ ಸಿದ್ಧತೆಗಳು ನಡೆದಿವೆ.ಸಂಜೆ 4 ಗಂಟೆಯಿಂದ ರಾಜಾಜಿ ಹಾಲ್‌ನಿಂದ ಅಂತಿಮ ಯಾತ್ರೆ ಆರಂಭವಾಗಲಿದೆ.


ಅಂತಿಮ ದರ್ಶನಕ್ಕೆ ಬಂದಿರುವಪ್ರತಿಯೊಬ್ಬರು ಶಾಂತ ರೀತಿಯಲ್ಲಿ ವರ್ತಿಸಬೇಕೆಂದು ಮನವಿ ಮಾಡುತ್ತೇನೆ. ಇದಕ್ಕಿಂತ ಹೆಚ್ಚಿನದಾಗಿ ನನಗೇನೂ ಬೇಡ. ಇದು ನೀವು ಕರುಣಾನಿಧಿ ಅವರಿಗೆ ನೀಡುವ ಗೌರವ ಎಂದು ಎಂ.ಕೆ ಸ್ಟಾಲಿನ್ ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.