ADVERTISEMENT

ದ್ರಾವಿಡ ಆಂದೋಲನದ ಕೋಟೆ ಕಟ್ಟಿದ್ದ ರಾಜಕೀಯ ಪ್ರತಿಭೆ

ಸನತ್ ಕುಮಾರ ಬೆಳಗಲಿ
Published 7 ಆಗಸ್ಟ್ 2018, 20:02 IST
Last Updated 7 ಆಗಸ್ಟ್ 2018, 20:02 IST
ಚೆನ್ನೈನಲ್ಲಿ ದುಃಖತಪ್ತ ಅಭಿಮಾನಿಗಳು
ಚೆನ್ನೈನಲ್ಲಿ ದುಃಖತಪ್ತ ಅಭಿಮಾನಿಗಳು   

ಕರುಣಾನಿಧಿ ಅವರ ನಿಧನದಿಂದ ಪೆರಿಯಾರ ರಾಮಸ್ವಾಮಿ ನಾಯ್ಕರ ಅವರು ಕಟ್ಟಿದ ವಿಚಾರವಾದಿ ದ್ರಾವಿಡ ಚಳವಳಿಯ ಕೊನೆಯ ಕೊಂಡಿಯೊಂದು ಕಳಚಿದಂತಾಗಿದೆ.

ತಮಿಳುನಾಡನ್ನು ದ್ರಾವಿಡ ಆಂದೋಲನದ ಕೋಟೆಯನ್ನಾಗಿ ಕಟ್ಟಿದವರಲ್ಲಿ ಕರುಣಾನಿಧಿ ಅಗ್ರಗಣ್ಯರು, ಮೂವತ್ತರ ದಶಕದ ಎಲ್ಲ ಯುವಕರಂತೆ ಎಡಪಂಥೀಯ ವಿಚಾರಗಳಿಂದ ಪ್ರಭಾವಿತರಾಗಿದ್ದ ಕರುಣಾನಿಧಿ ತಮ್ಮ ಮಗನಿಗೆ ರಷ್ಯದ ಕ್ರಾಂತಿನಾಯಕ ಸ್ಟಾಲಿನ್ ಅವರ ಹೆಸರನ್ನಿಟ್ಟಿದ್ದರು. ಅಣ್ಣಾದೊರೈ ನಂತರ ಡಿಎಂಕೆ ಪಕ್ಷದ ಸಾರಥ್ಯ ವಹಿಸಿ ಕಾಂಗ್ರೆಸ್, ಬಿಜೆಪಿಗಳು ರಾಜ್ಯದಲ್ಲಿ ಕಾಲಿಡದಂತೆ ನೋಡಿಕೊಂಡರು.

ಕಟ್ಟಾ ನಾಸ್ತಿಕರಾಗಿದ್ದ ಕರುಣಾನಿಧಿ ರಾಜಕೀಯದಲ್ಲಿ ರಾಜಿ ಮಾಡಿಕೊಂಡರೂ ನಂಬಿದ ವಿಚಾರಗಳಲ್ಲಿ ಎಂದೂ ರಾಜಿಯಾಗಲಿಲ್ಲ. ಆದರೆ ಡಿಎಂಕೆಯನ್ನು ಕುಟುಂಬದ ಹಿಡಿತದಿಂದ ಮುಕ್ತಗೊಳಿಸಲು ಇವರಿಂದ ಆಗಲಿಲ್ಲ. ಪುತ್ರ ವ್ಯಾಮೋಹ ಅವರ ಅಸಹಾಕತೆಯಾಗಿತ್ತೋ ದೌರ್ಬಲ್ಯವಾಗಿತ್ತೊ ಗೊತ್ತಿಲ್ಲ.

ADVERTISEMENT

ಅವರ ಕೊನೆಯ ದಿನಗಳಲ್ಲಿ ಹಿಂದೂ ಮುನ್ನಾನಿ ಮೂಲಕ ಸಂಘ ಪರಿವಾರ ರಾಜ್ಯದಲ್ಲಿ ಕಾಲು ಚಾಚಿತ್ತು. ಜಯಲಲಿತಾ ನಂತರ ಈಗ ಕರುಣಾನಿಧಿ ಹೋಗಿದ್ದಾರೆ. ಅವರನ್ನು ಸರಿಗಟ್ಟುವ ನಾಯಕತ್ವ ತಮಿಳುನಾಡಿಗೆ ಇಲ್ಲ, ಬರಲಿರುವ ದಿನಗಳು ನಿರ್ಣಾಯಕವಾಗುತ್ತವೆ. ಕರುಣಾನಿಧಿ ಅಗಲಿಕೆಯ ಶೂನ್ಯವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ.

ಅಂದಹಾಗೆ, ಪ್ರತಿಭಾವಂತ ಲೇಖಕರಾಗಿದ್ದ ಕರುಣಾನಿಧಿ ಅವರಿಗೂ ತಮಿಳು ಚಿತ್ರರಂಗಕ್ಕೂ ಬಿಡಲಾಗದ ನಂಟು. ಅನೇಕ ಸಿನಿಮಾಗಳಿಗೆ ಅವರು ಚಿತ್ರಕತೆ ಬರೆದಿದ್ದಾರೆ.

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.