ಚೆನ್ನೈ: ನಗರದ ಗೋಪಾಲಪುರಂನಲ್ಲಿರುವ, ಡಿಎಂಕೆ ನಾಯಕ ಕರುಣಾನಿಧಿ ಅವರ ನಿವಾಸ ‘ಅಂಜುಗಂ ಇಲ್ಲಂ’ ಅನ್ನು ಬಡವರ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತದೆ.
ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ಕರುಣಾನಿಧಿ ವಾಸವಾಗಿದ್ದ ಈ ಮನೆ, ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರ ಭೇಟಿಯಿಂದ ಸದಾ ಗಿಜಿಗುಡುತ್ತಿತ್ತು. ತಮಿಳು ಚಿತ್ರರಂಗದ ಕಥೆಗಾರ, ಸಂಭಾಷಣಾಕಾರರಾಗಿ ಮುಂಚೂಣಿಯಲ್ಲಿದ್ದ ಕರುಣಾನಿಧಿ ಈ ಮನೆಯನ್ನು ಶರಭೇಶ್ವರ ಅಯ್ಯರ್ ಎಂಬುವವರಿಂದ 1955ರಲ್ಲಿ ಖರೀದಿ ಮಾಡಿದ್ದರು.
2010ರಲ್ಲಿ ತಮ್ಮ 86ನೇ ಜನ್ಮದಿನಾಚರಣೆ ಸಂದರ್ಭದಲ್ಲಿ, ಈ ಮನೆಯನ್ನು ಅಣ್ಣಾ ಅಂಜುಗಂ ಟ್ರಸ್ಟ್‌ಗೆ ದೇಣಿಗೆಯಾಗಿದ್ದ ನೀಡಿದ್ದ ಕರುಣಾನಿಧಿ ಅವರು, ಬಡವರಿಗಾಗಿ ಆಸ್ಪತ್ರೆ ನಡೆಸುವಂತೆ ತಿಳಿಸಿದ್ದರು. ಈಗ ‘ಕಲೈನಾರ್ ಕರುಣಾನಿಧಿ ಆಸ್ಪತ್ರೆ’ ಎಂಬ ಹೆಸರಿನಡಿ ಆಸ್ಪತ್ರೆಯೊಂದನ್ನು ಆರಂಭಿಸಲು ಟ್ರಸ್ಟ್ ಮುಂದಾಗಿದೆ.
‘ನಾನು ವಿಚಾರವಾದಿ. ಈ ಕ್ರಮದಿಂದ ನನಗೆ ತೃಪ್ತಿಯಾಗಿದೆ. ಒಂದು ವೇಳೆ ನಾನು ಅಧ್ಯಾತ್ಮದಲ್ಲಿ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದರೆ ನನ್ನ ಆತ್ಮಕ್ಕೂ ತೃಪ್ತಿಯಾಗುತ್ತಿತ್ತು’ ಎಂದು ತಮ್ಮ ಮನೆಯನ್ನು ಕೊಡುಗೆಯಾಗಿ ನೀಡುವ ಸಮಾರಂಭದಲ್ಲಿ ಅವರು ಹೇಳಿದ್ದರು.
ಇದನ್ನೂ ಓದಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.