ADVERTISEMENT

ಕಾಶ್ಮೀರದಲ್ಲಿ ಉಗ್ರರಿಂದ ಗ್ರೆನೇಡ್‌ ದಾಳಿ: ಪೊಲೀಸ್‌ ಕಾನ್ಸ್‌ಸ್ಟೆಬಲ್‌ ಸಾವು

ಏಜೆನ್ಸೀಸ್
Published 30 ಸೆಪ್ಟೆಂಬರ್ 2018, 6:55 IST
Last Updated 30 ಸೆಪ್ಟೆಂಬರ್ 2018, 6:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶೋಪಿಯಾನ್: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಸಾದರ್‌ ಪೊಲೀಸ್‌ ಠಾಣೆ ಮೇಲೆಭಾನುವಾರ ಬೆಳಿಗ್ಗೆ ಉಗ್ರರುಬಂದೂಕು ಮತ್ತುಗ್ರೆನೇಡ್‌ಗಳಿಂದ ದಾಳಿ ನಡೆಸಿದ್ದು, ಪೊಲೀಸ್‌ ಕಾನ್‌ಸ್ಟೆಬಲ್‌ ಸಕೀಬ್ ಮೊಯಿದ್ದೀನ್‌ಮೃತಪಟ್ಟಿದ್ದಾರೆ.

ಆ ವೇಳೆ ಸಕೀಬ್ ಠಾಣೆಯಮುಖ್ಯದ್ವಾರ ಬಳಿ ಗಸ್ತುಕಾಯುತ್ತಿದ್ದರು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಕೀಬ್‌ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ದಾಳಿಯ ವಿಷಯ ತಿಳಿಯುತ್ತಿದ್ದಂತೆ ಸೇನೆ ಮತ್ತು ಸಿಆರ್‌ಪಿಎಫ್‌ನ ಹೆಚ್ಚುವರಿ ಪಡೆಸ್ಥಳಕ್ಕೆ ಧಾವಿಸಿದ್ದು, ಆ ಪ್ರದೇಶಕ್ಕೆಸಂಪೂರ್ಣ ನಾಕಬಂಧಿ ಹಾಕಿದೆ.ಕಾನ್ಸ್‌ಸ್ಟೆಬಲ್‌ ಬಳಿಯಿದ್ದ ಬಂದೂಕವನ್ನು ಕಿತ್ತುಕೊಂಡು ಉಗ್ರರುಪರಾರಿಯಾಗಿದ್ದಾರೆ. ಶೋಧಕಾರ್ಯಚರಣೆ ಮುಂದುವರಿದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.