ADVERTISEMENT

ಕಾಶ್ಮೀರದಾದ್ಯಂತ ತೀವ್ರ ಶೀತಗಾಳಿ: ಕನಿಷ್ಠ ತಾಪಮಾನ ದಾಖಲು

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 11:44 IST
Last Updated 14 ಜನವರಿ 2022, 11:44 IST
ಕಾಶ್ಮೀರ
ಕಾಶ್ಮೀರ   

ಶ್ರೀನಗರ: ಕಾಶ್ಮೀರ ಕಣಿವೆಯಾದ್ಯಂತ ಶುಕ್ರವಾರ ತೀವ್ರ ಶೀತಗಾಳಿ ಮುಂದುವರೆದಿದ್ದು, ಶೀತಗಾಳಿಯಿಂದಾಗಿ ಕಣಿವೆಯ ಹಲವು ಪ್ರದೇಶಗಳಲ್ಲಿಗುರುವಾರ ರಾತ್ರಿ ಕನಿಷ್ಠ ತಾಪಮಾನ ದಾಖಲಾಗಿದೆ.

ಉತ್ತರ ಕಾಶ್ಮೀರದ ಪ್ರಸಿದ್ಧ ಗುಲ್‌ಮಾರ್ಗ್‌ನಲ್ಲಿ –10.5 ಡಿಗ್ರಿ ಸೆಲ್ಸಿಯಸ್‌, ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ –10.3, ಶ್ರೀನಗರದಲ್ಲಿ –3.4, ಕಣಿವೆಯ ಹೆಬ್ಬಾಗಿಲು ಕ್ವಾಜಿಗುಂಡದಲ್ಲಿ –7.8, ಕೋಕರ್‌ನಾಗ್‌ನಲ್ಲಿ –7.5, ಕುಲ್ಗಾಂನಲ್ಲಿ –9.2, ಕುಪ್ವಾರದಲ್ಲಿ –4.2, ಪುಲ್ವಾಮದಲ್ಲಿ –4, ಲಡಾಕ್‌ನ ಲೇಹ್‌ನಲ್ಲಿ –13.9, ಕಾರ್ಗಿಲ್‌ನಲ್ಲಿ –19.9, ಜಗತ್ತಿನ ಎರಡನೇ ಅತಿದೊಡ್ಡ ಶೀತಪ್ರದೇಶವಾದ ಡ್ರಾಸ್‌ನಲ್ಲಿ–24.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

‘ರಾತ್ರಿಯ ವೇಳೆಯಲ್ಲಿ ತಾಪಮಾನವು ಹಲವು ಡಿಗ್ರಿಗಳಷ್ಟು ಕಡಿಮೆಯಾಗಿದೆ. ಮುಂದಿನ ಕೆಲ ದಿನಗಳವರೆಗೆ ಒಣಹವೆ ಮುಂದುವರೆದಿದ್ದು, ಕನಿಷ್ಠಮಟ್ಟದ ತಾಪಮಾನ ದಾಖಲಾಗಲಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.