ADVERTISEMENT

ಪಿಎಂಒ ಅಧಿಕಾರಿ ಸೋಗು: ಕಾಶ್ಮೀರಿ ವ್ಯಕ್ತಿ ಸೆರೆ

ಪಿಟಿಐ
Published 16 ಡಿಸೆಂಬರ್ 2023, 21:00 IST
Last Updated 16 ಡಿಸೆಂಬರ್ 2023, 21:00 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಭುವನೇಶ್ವರ: ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ ಮತ್ತು ಸೇನೆ ವೈದ್ಯನ ಸೋಗಿನಲ್ಲಿ ಜನರಿಗೆ ವಂಚಿಸುತ್ತಿದ್ದ ಕಾಶ್ಮೀರ ಮೂಲದ ವ್ಯಕ್ತಿಯೊಬ್ಬರನ್ನು ಒಡಿಶಾ ಪೊಲೀಸ್‌ ಇಲಾಖೆಯ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಟಿಎಫ್‌) ಬಂಧಿಸಿದೆ. 

ಬಂಧಿತನನ್ನು ಸೈಯದ್‌ ಇಶಾನ್‌ ಬುಕಾರಿ ಅಲಿಯಾಸ್‌ ಡಾ. ಇಶಾನ್‌ ಬುಕಾರಿ ಎಂದು ಗುರುತಿಸಲಾಗಿದೆ. ಪಾಕಿಸ್ತಾನದ ಹಲವರೊಂದಿಗೆ ಈತನಿಗೆ ಸಂಪರ್ಕವಿದೆ ಎಂದು ತಿಳಿದು ಬಂದಿದೆ. ಈತನ ಕುರಿತ ಲಭ್ಯವಾದ ಮಾಹಿತಿ ಆಧರಿಸಿ ಅಧಿಕಾರಿಗಳು ಜೈಪುರ ಜಿಲ್ಲೆಯ ನ್ಯೂಲ್ಪುರ್ ಎಂಬಲ್ಲಿ ಬಂಧಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT