ನಾಂದೇಡ್: ಕಾಶ್ಮೀರಿ ಪಂಡಿತರು ಶಿವಸೇನಾ ಸ್ಥಾಪಕ ಬಾಳ ಠಾಕ್ರೆ ಅವರನ್ನು ಪೂಜ್ಯವ್ಯಕ್ತಿಯಾಗಿ ಪರಿಗಣಿಸಿದ್ದಾರೆ ಎಂದು ಪಕ್ಷದ ಕಾರ್ಯದರ್ಶಿ ಮತ್ತು ರಾಜ್ಯಸಭೆ ಸದಸ್ಯ ಅನಿಲ್ ದೇಸಾಯಿ ಹೇಳಿದ್ದಾರೆ.
''1990ರಲ್ಲಿ ಉಗ್ರರಿಗೆ ಗುರಿಯಾಗಿದ್ದ ಮತ್ತು ಬಲವಂತದಿಂದ ಕಣಿವೆ ರಾಜ್ಯವನ್ನು ತೊರೆಯಲ್ಪಟ್ಟ ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರದಲ್ಲಿ ನೆಲೆಸಲು ಬಾಳ ಠಾಕ್ರೆ ಅವರು ಅವಕಾಶ ಮಾಡಿಕೊಟ್ಟರು. ಅಂದಿನಿಂದ ಅವರ ಪಾಲಿಗೆ ಠಾಕ್ರೆ ಅವರು ಪೂಜ್ಯವ್ಯಕ್ತಿಯಾಗಿದ್ದಾರೆ'' ಎಂದು ಅನಿಲ್ ದೇಸಾಯಿ ಗುರುವಾರ ತಿಳಿಸಿದ್ದಾರೆ.
''ಮಹಾರಾಷ್ಟ್ರದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಬಾಳ ಠಾಕ್ರೆಯವರು ನೆರವಾದರು'' ಎಂದು ದೇಸಾಯಿ ತಿಳಿಸಿದರು.
''ಪಂಡಿತರು ಕಾಶ್ಮೀರವನ್ನು ತೊರೆದು ಓಡಿ ಹೋಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಾಗ ಅಂದಿನ ಸರ್ಕಾರ ಏನು ಮಾಡುತ್ತಿತ್ತು ಎಂಬುದು ವಿಶ್ವಕ್ಕೆ ಗೊತ್ತಿದೆ. ಶಿವಸೇನಾ ಮುಖ್ಯಸ್ಥರು ಪಂಡಿತರಿಗೆ ಮಹಾರಾಷ್ಟ್ರದಲ್ಲಿ ನೆಲೆಸಲು ನೆರವಾದರು. ಇಲ್ಲಿ ನೆಲೆಸಿರುವ ಪಂಡಿತರು ಬಾಳಸಾಹೇಬ್ ಠಾಕ್ರೆ ಅವರನ್ನು ಪೂಜ್ಯವ್ಯಕ್ತಿಯೆಂದು ಗೌರವಿಸುತ್ತಾರೆ'' ಎಂದು ಶಿವಸೇನಾ ಸಂಸದ ಮಾಧ್ಯಮಕ್ಕೆ ತಿಳಿಸಿದರು.
''ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರತಿಕಾರದ ರಾಜಕಾರಣ ಮಾಡುವುದಿಲ್ಲ'' ಎಂದು ಇದೇ ವೇಳೆ ದೇಸಾಯಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.