ADVERTISEMENT

ಕಚ್ಚತೀವು ವಿಚಾರದಿಂದ ಭಾರತ–ಶ್ರೀಲಂಕಾ ಬಾಂಧವ್ಯಕ್ಕೆ ಧಕ್ಕೆ: ಯಶವಂತ ಸಿನ್ಹಾ

ಪಿಟಿಐ
Published 11 ಏಪ್ರಿಲ್ 2024, 14:32 IST
Last Updated 11 ಏಪ್ರಿಲ್ 2024, 14:32 IST
ಯಶವಂತ ಸಿನ್ಹಾ
ಯಶವಂತ ಸಿನ್ಹಾ   

ನವದೆಹಲಿ: ‘ಬಿಜೆಪಿಯು ಕಚ್ಚತೀವು ದ್ವೀಪವನ್ನು ಲೋಕಸಭಾ ಚುನಾವಣೆಯ ವಿಚಾರವನ್ನಾಗಿಸಿದ್ದು, ಇದು ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಕಡೆಗಣಿಸಲಾಗಿದೆ’ ಎಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಗುರುವಾರ ಆರೋಪಿಸಿದರು.

‘ಪ್ರಧಾನಿ ಅವರನ್ನು ಹೊರತುಪಡಿಸಿ ಈ ವಿಚಾರದ ಬಗ್ಗೆ ಬೇರೆ ಯಾರು ಮಾತನಾಡದಿರುವುದು ನಿರಾಶೆ ಉಂಟುಮಾಡಿದೆ. ಕಚ್ಚತೀವು ಅಂತರರಾಷ್ಟ್ರೀಯ ಸಾಗರದ ಗಡಿಯಲ್ಲಿ ಶ್ರೀಲಂಕಾದ ಕಡೆಗೆ ಬರುವ ದ್ವೀಪವಾಗಿತ್ತು ಮತ್ತು ಅದು ಆ ದೇಶದ ಪಾಲಾಗಿದೆ’ ಎಂದು ಹೇಳಿದರು.

‘ಈ ವಿಚಾರವನ್ನು ಮುನ್ನೆಲೆಗೆ ತಂದಿರುವುದರಿಂದ, ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡಲಿದೆ. ನೀವು ಈ ದ್ವೀಪವನ್ನು ಮರಳಿ ಪಡೆಯಲು ಸೇನಾಪಡೆಯನ್ನು ಕಳುಹಿಸುತ್ತಿರೋ’ ಎಂದೂ ಅವರು ಪ್ರಶ್ನಿಸಿದರು.

ADVERTISEMENT

‘ಇದು ಚುನಾವಣಾ ವಿಚಾರವಲ್ಲದೆ ಬೇರೇನೂ ಅಲ್ಲ’ ಎಂದು ಹೇಳಿದರು.

‘ಚುನಾವಣಾ ಬಾಂಡ್‌ ದೊಡ್ಡ ಹಗರಣ’:

ಚುನಾವಣಾ ಬಾಂಡ್‌ ದೊಡ್ಡ ಹಗರಣವಾಗಿದೆ ಮತ್ತು ನೋಟು ರದ್ದತಿಯು ಕಪ್ಪು ಹಣವನ್ನು ‘ಬಿಳಿ’ಯಾಗಿಸುವ ಮಾರ್ಗವಾಗಿತ್ತು ಎಂದು ಯಶವಂತ ಸಿನ್ಹಾ ಆರೋಪಿಸಿದರು.

ಕೇಂದ್ರದ ಬಿಜೆಪಿ ಸರ್ಕಾರವು ಭ್ರಷ್ಟಾಚಾರವನ್ನು ಮರೆಮಾಚಲು ಗೋಪ್ಯತೆಯನ್ನು ಹೊದಿಕೆಯಂತೆ ಬಳಸುತ್ತಿದೆ ಎಂದು ‘ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.