ADVERTISEMENT

ನಾಳೆಯಿಂದ ತೆರೆಯಲಿವೆ ಕೇದಾರನಾಥ, ಗಂಗೋತ್ರಿ, ಯಮುನೇತ್ರಿ ದೇಗುಲಗಳು

ಪಿಟಿಐ
Published 9 ಮೇ 2024, 11:27 IST
Last Updated 9 ಮೇ 2024, 11:27 IST
ಕೇದಾರನಾಥ ದೇವಾಲಯ
ಕೇದಾರನಾಥ ದೇವಾಲಯ   

ಡೆಹರಾಡೂನ್‌: ಉತ್ತರಾಖಂಡದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೇತ್ರಿ ದೇಗುಲಗಳು ಶುಕ್ರವಾರದಿಂದ (ಮೇ 10) ಭಕ್ತರಿಗಾಗಿ ತೆರೆಯಲಿವೆ.

ಹಿಮಾಲಯದಲ್ಲಿ ನೆಲೆ ನಿಂತಿರುವ ಈ ದೇಗುಲಗಳನ್ನು ಹಿಮಪಾತದಿಂದಾಗಿ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಬೇಸಿಗೆಯ ಆರಂಭದಲ್ಲಿ ಮತ್ತೆ ತೆರೆಯಲಾಗುತ್ತದೆ.

ಕೇದಾರನಾಥ ಹಾಗೂ ಯಮುನೇತ್ರಿ ದೇಗುಲಗಳನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಗುತ್ತದೆ. ಗಂಗೋತ್ರಿ ದೇಗುಲ ಮಧ್ಯಾಹ್ನ 12.20ಕ್ಕೆ ತೆರೆಯಲಿದೆ ಎಂದು ಸಮಿತಿ ತಿಳಿಸಿದೆ.

ADVERTISEMENT

ಚಾರ್‌ಧಾಮದ ಮತ್ತೊಂದು ದೇಗುಲ ಬದರಿನಾಥ, ಮೇ 12ರಂದು ಬೆಳಿಗ್ಗೆ ತೆರೆಯಲಿದೆ. ಕೇದಾರನಾಥ ದೇಗುಲವನ್ನು 20 ಕ್ವಿಂಟಲ್‌ ಹೂವುಗಳಿಂದ ಸಿಂಗರಿಸಲಾಗುವುದು ಎಂದು ಬದರಿನಾಥ–ಕೇದಾರನಾಥ ದೇಗುಲ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.