ADVERTISEMENT

ಇ.ಡಿ ಸಮನ್ಸ್‌ಗೆ ಕೇಜ್ರಿವಾಲ್‌ ಗೈರು

ಕಾನೂನು ಬಾಹಿರ ಸಮನ್ಸ್‌ ಎಂದು ಬಿಜೆಪಿ, ಇ.ಡಿ ವಿರುದ್ಧ ಆಪ್‌ ವಾಗ್ದಾಳಿ

ಪಿಟಿಐ
Published 18 ಮಾರ್ಚ್ 2024, 16:51 IST
Last Updated 18 ಮಾರ್ಚ್ 2024, 16:51 IST
ದೆಹಲಿ ಮುಖ್ಯಮಂತ್ರಿ, ಆಮ್‌ಆದ್ಮಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ 
ದೆಹಲಿ ಮುಖ್ಯಮಂತ್ರಿ, ಆಮ್‌ಆದ್ಮಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌    

ನವದೆಹಲಿ: ದೆಹಲಿಯ ಜಲ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅವ್ಯಹಾರಗಳಿಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸಮನ್ಸ್‌ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗೈರಾಗಿದ್ದಾರೆ.

‘ಇ.ಡಿ ನೀಡಿರುವ ಸಮನ್ಸ್‌ ಕಾನೂನು ಬಾಹಿರವಾಗಿದ್ದು, ಲೋಕಸಭೆ ಚುನಾವಣೆಗೆ ಕೇಜ್ರಿವಾಲ್‌ ಪ್ರಚಾರ ಮಾಡದಂತೆ ತಡೆಯಲು ಕೇಂದ್ರ ಬಿಜೆಪಿ ಸರ್ಕಾರವು ಇ.ಡಿಯನ್ನು ಬಳಸಿಕೊಳ್ಳುತ್ತಿದೆ. ಇ.ಡಿಯನ್ನು ಬಳಸಿಕೊಂಡು ಲೋಕಸಭೆಗೆ ಹೋರಾಟ ನಡೆಸಲು ಬಿಜೆ‍ಪಿ ಯೋಜಿಸಿದೆ.’ ಎಂದು ಆಮ್‌ ಆದ್ಮಿ  ಪಕ್ಷ ಆರೋಪಿಸಿದೆ.  

ದೆಹಲಿಯ ಅಬಕಾರಿ ನೀತಿ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆಸಿದ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರಿಗೆ ಇ.ಡಿ ಈಗಾಗಲೇ 8 ಬಾರಿ ಸಮನ್ಸ್‌ ಜಾರಿ ಮಾಡಿದೆ. ಯಾವುದೇ ವಿಚಾರಣೆಗೆ ಅವರು ಈವರೆಗೆ ಹಾಜರಾಗಿಲ್ಲ. ಮಾರ್ಚ್‌21 ರಂದು ಹಾಜರಾಗುವಂತೆ ಕೇಜ್ರಿವಾಲ್‌ ಇ.ಡಿ 9ನೇ ಸಮನ್ಸ್‌ ಜಾರಿ ಮಾಡಿದೆ. ಈ ನಡುವೆ ಜಲ ಮಂಡಳಿ ಅವ್ಯವಹಾರದಲ್ಲೂ ಅವರಿಗೆ ಇ.ಡಿ ಸಮನ್ಸ್‌ ನೀಡಿ, ಸೋಮವಾರ ಮಾರ್ಚ್‌  18ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಅವರು ಹಾಜರಾಗಿಲ್ಲ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.