ADVERTISEMENT

ಬ್ಲಾಕ್‌ಚೇನ್‌ ಟೆಕ್ನಾಲಜಿ ಕುರಿತು ಆನ್‌ಲೈನ್‌ನಲ್ಲಿ ಉಚಿತ ಕೋರ್ಸ್‌

ಪಿಟಿಐ
Published 16 ಜುಲೈ 2021, 13:06 IST
Last Updated 16 ಜುಲೈ 2021, 13:06 IST
ಆನ್‌ಲೈನ್‌ ಕಲಿಕೆ– ‍ಪ್ರಾತಿನಿಧಿಕ ಚಿತ್ರ
ಆನ್‌ಲೈನ್‌ ಕಲಿಕೆ– ‍ಪ್ರಾತಿನಿಧಿಕ ಚಿತ್ರ   

ತಿರುವನಂತಪುರಂ: ಆಧುನಿಕ ತಂತ್ರಜ್ಞಾನಗಳ ಬಗ್ಗೆ ತಾಂತ್ರಿಕೇತರ ಹಿನ್ನೆಲೆಯ ವಿದ್ಯಾರ್ಥಿಗಳಿಗೂ ಅರಿವು ಮೂಡಿಸುವ ಉದ್ದೇಶದಿಂದ ಬ್ಲಾಕ್‌ಚೇನ್‌ ಟೆಕ್ನಾಲಜಿ ಕುರಿತು (ವ್ಯವಸ್ಥಿತವಾಗಿ ಮಾಹಿತಿ ಸಂಗ್ರಹಿಸುವ ಕ್ರಮ) ಉಚಿತವಾಗಿ ಕೋರ್ಸ್‌ ಆಯೋಜಿಸಲು ಇಲ್ಲಿನ ಡಿಜಿಟಲ್‌ ಯೂನಿವರ್ಸಿಟಿ (ಡಿಯುಕೆ) ನಿರ್ಧರಿಸಿದೆ.

ಆನ್‌ಲೈನ್ ಕೋರ್ಸ್‌ ಅನ್ನು ಕೇರಳ ಬ್ಲಾಕ್‌ಚೇನ್‌ ಅಕಾಡೆಮಿ (ಕೆಬಿಎ) ಮತ್ತು ಕೇರಳ ನವೀನ ಮತ್ತು ಕಾರ್ಯತಂತ್ರ ಅಭಿವೃದ್ಧಿ ಮಂಡಳಿ (ಕೆ–ಡಿಸ್ಕ್) ಸಹಯೋಗದಲ್ಲಿ ನಡೆಸಲಾಗುತ್ತದೆ. ಶಾಲಾ ಹಂತದಿಂದ ಪದವಿವರೆಗಿನ ವಿವಿಧ ವಿದ್ಯಾರ್ಥಿಗಳಿಗೆ ಇದರ ಸದುಪಯೋಗವಾಗಲಿದೆ ಎಂದು ಹೇಳಿಕೆಯು ತಿಳಿಸಿದೆ.

ಎಂಜಿನಿಯರಿಂಗ್, ವಿಜ್ಞಾನ, ಕಲೆ ಸೇರಿದಂತೆ ವಿವಿಧ ನಿಕಾಯಗಳ ಹಾಗೂ ತಾಂತ್ರಿಕ ಮತ್ತು ತಾಂತ್ರಿಕೇತರ ವಿದ್ಯಾರ್ಥಿಗಳಿಗೂ ಸುಲಭವಾಗಿ ಅರ್ಥವಾಗುವಂತೆ ಒಟ್ಟು 30 ಗಂಟೆ ಅವಧಿಯ ಈ ಕೋರ್ಸ್‌ ಅನ್ನು ರೂಪಿಸಲಾಗಿದೆ ಎಂದು ಡಿಯುಕೆಯ ಡೀನ್‌ ಡಾ.ಅಶ್ರಫ್‌ ಅವರು ತಿಳಿಸಿದ್ದಾರೆ.

ADVERTISEMENT

ಫೌಂಡೇಷನ್ ಕೋರ್ಸ್‌ಗೆ ನೋಂದಣಿ ಪ್ರಕ್ರಿಯೆ ಜುಲೈ 19ರಂದು ಆರಂಭವಾಗಲಿದೆ. ಆಸಕ್ತರು ಮಾಹಿತಿಗೆ ವೆಬ್‌ಸೈಟ್ (http://prajna.duk.ac.in) ಸಂಪರ್ಕಿಸಬಹುದು ಎಂದು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.