ADVERTISEMENT

ಶಬರಿಮಲೆ ಗಲಭೆಯಲ್ಲಿ ಡಿವೈಎಫ್ಐ ಕೈವಾಡ: ಕೆ.ಸುರೇಂದ್ರನ್ ಆರೋಪ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 3:18 IST
Last Updated 9 ಡಿಸೆಂಬರ್ 2018, 3:18 IST
ಕೆ. ಸುರೇಂದ್ರನ್  (ಕೃಪೆ: ಫೇಸ್‍ಬುಕ್)
ಕೆ. ಸುರೇಂದ್ರನ್ (ಕೃಪೆ: ಫೇಸ್‍ಬುಕ್)   

ತಿರುವನಂತಪುರಂ: ಶಬರಿಮಲೆಯಲ್ಲಿ ಚಿತ್ತಿರ ಆಟ್ಟ ವಿಶೇಷ ದಿನದಂದು ಸಂಭವಿಸಿದ ಗಲಭೆಯಲ್ಲಿ ತ್ರಿಶ್ಶೂರಿನ ಡಿವೈಎಫ್ಐ ಕಾರ್ಯಕರ್ತರಕೈವಾಡ ಇದೆ ಎಂದು ಕೇರಳ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.

ಗಲಭೆಯ ದೃಶ್ಯಗಳನ್ನು ನೋಡಿಯಾವ ಪಕ್ಷದ ಕಾರ್ಯಕರ್ತರು ಆ ಗಲಭೆಯಲ್ಲಿದ್ದರುಎಂಬುದನ್ನು ಸರ್ಕಾರ ಹೇಳಬೇಕಿದೆ. ಸನ್ನಿಧಾನಕ್ಕೆ ಆಗಮಿಸುತ್ತಿದ್ದ ಮಹಿಳೆಯನ್ನು ತಡೆಯುವ ವೇಳೆ ಅವಳೆ ಕೊಲ್ಲ್ ಡಾ (ಆಕೆಯನ್ನು ಕೊಂದು ಬಿಡು) ಎಂಬ ಕೂಗು ವಿಡಿಯೊದಲ್ಲಿ ಕೇಳಿಸುತ್ತದೆ. ಈ ಕೂಗು ಯಾರದ್ದು ಎಂದು ಸರ್ಕಾರ ಹೇಳಬೇಕು ಎಂದಿದ್ದಾರೆ ಸುರೇಂದ್ರನ್.

ಚಿತ್ತಿರ ಆಟ್ಟ ವಿಶೇಷ ದಿನದಂದ ಮಗುವಿಗೆ ಅನ್ನಪ್ರಾಶನ ಮಾಡಲು ಬಂದ ಮಹಿಳೆಯನ್ನು ತಡೆದ ಪ್ರಕರಣದಲ್ಲಿ ಬಂಧಿತನಾಗಿದ್ದ ಸುರೇಂದ್ರನ್‌‍ಗೆ ಕೇರಳ ಹೈಕೋರ್ಟ್ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿತ್ತು.

ADVERTISEMENT

ಶಬರಿಮಲೆ ವಿಷಯದಲ್ಲಿ ಸರ್ಕಾರ ಪರಾಭವಗೊಂಡಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಬಗ್ಗೆ ಸರ್ಕಾರದ ನಿಲುವು ಏನೆಂದು ಹೇಳಬೇಕು. ಸುಪ್ರೀಂಕೋರ್ಟ್ ತೀರ್ಪು ಬಗ್ಗೆ ಸಿಪಿಎಂನಲ್ಲಿಯೇ ಭಿನ್ನಮತ ಇದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹಠ ಇದಕ್ಕೆಲ್ಲ ಕಾರಣ.ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದಾಗಿ ಹೇಳಿದ ಪಿಣರಾಯಿ ಈಗ ಹಿಂದೆ ಸರಿದಿರುವುದು ಯಾಕೆ ಎಂದು ಹೇಳಬೇಕು.ಭಕ್ತರ ನಂಬಿಕೆಯನ್ನು ಪರಿಗಣಿಸಿ ಪಿಣರಾಯಿ ಈ ವಿಷಯ ಬಗ್ಗೆ ಮೌನ ಮುರಿಯಬೇಕು.
ಮುಂಜಾಗ್ರತಾ ಕ್ರಮ ಎಂದು ನನ್ನನ್ನು ಬಂಧಿಸಿದಪೊಲೀಸ್, ಆಮೇಲೆನನ್ನ ವಿರುದ್ಧ 5 ಸುಳ್ಳು ಪ್ರಕರಣಗಳನ್ನು ದಾಖಲಿಸಿದರು.ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಪ್ರಕರಣಗಳನ್ನು ಕಾನೂನು ಮತ್ತು ರಾಜಕೀಯ ರೀತಿಯಲ್ಲಿಯೇ ಎದುರಿಸುತ್ತೇನೆ.ನನಗೆ ಚಹಾ ಖರೀದಿಸಿಕೊಟ್ಟ ಎಂದು ಒಬ್ಬ ಪೊಲೀಸ್ ಅಧಿಕಾರಿಯನ್ನು ವಜಾ ಮಾಡಲಾಗಿದೆ.ಎನ್ಎಸ್ಎಸ್, ತಂತ್ರಿ ಕುಟುಂಬ, ಪಂದಳಂ ರಾಜಮನೆತನದವರು ಮುಷ್ಕರದಲ್ಲಿ ಭಾಗಿಯಾದ ನಂತರವೇ ಈ ಮುಷ್ಕರ ಜನಪರಮುಷ್ಕರವಾಗಿ ಮಾರ್ಪಾಟಾಗಿದ್ದು ಎಂದು ಸುದ್ದಿಗೋಷ್ಠಿಯಲ್ಲಿಮಾತನಾಡಿದ ಸುರೇಂದ್ರನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.