ADVERTISEMENT

ಚಿನ್ನ ಸ್ಮಗ್ಲಿಂಗ್ – ಕೇರಳ ಸಿಎಂ ಪಿಣರಾಯಿ ವಿಜಯನ್‌ರಿಂದ ಕೋಮು ರಾಜಕಾರಣ: ಬಿಜೆಪಿ

ಏಜೆನ್ಸೀಸ್
Published 20 ಸೆಪ್ಟೆಂಬರ್ 2020, 7:45 IST
Last Updated 20 ಸೆಪ್ಟೆಂಬರ್ 2020, 7:45 IST
ಕೆ.ಸುರೇಂದ್ರನ್
ಕೆ.ಸುರೇಂದ್ರನ್   

ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣ ಮರೆಮಾಚಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೀಳುಮಟ್ಟದ ಕೋಮು ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇರಳ ಬಿಜೆಪಿ ಆರೋಪಿಸಿದೆ.

‘ಪವಿತ್ರ ಕುರಾನ್ ಮತ್ತು ಅಲ್ಪಸಂಖ್ಯಾತರ ಭಾವನೆಗಳು ಕೇರಳದ ಪ್ರಮುಖ ಗಮನಹರಿಸಬೇಕಾದ ವಿಷಯಗಳು ಎಂದು ಪಿಣರಾಯಿ ವಿಜಯನ್ ಶನಿವಾರ ಹೇಳಿದ್ದಾರೆ. ಅವರು ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಪವಿತ್ರ ಕುರಾನ್‌ನಿಂದ ಮುಚ್ಚಲು ಯತ್ನಿಸುತ್ತಿದ್ದಾರೆ’ ಎಂದು ಬಿಜೆಪಿಯ ಕೇರಳದ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.

ಎರ್ನಾಕುಲಂನಲ್ಲಿ ಮೂವರು ಅಲ್‌ ಖೈದಾ ಉಗ್ರರ ಬಂಧನ ವಿಚಾರ ಪ್ರಸ್ತಾಪಿಸಿದ ಅವರು, ರಾಜ್ಯವು ಭಯೋತ್ಪಾದಕರಿಗೆ ಸ್ವರ್ಗವಾಗಿ ಪರಿಣಮಿಸಿರುವುದು ಇದರಿಂದ ತಿಳಿದುಬರುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.