ADVERTISEMENT

ಕೇರಳ ಕ್ರಿಸ್‌ಮಸ್‌ ಹಿಂಸಾಚಾರ: 50 ವಲಸೆ ಕಾರ್ಮಿಕರ ಬಂಧನ

ಪಿಟಿಐ
Published 27 ಡಿಸೆಂಬರ್ 2021, 12:04 IST
Last Updated 27 ಡಿಸೆಂಬರ್ 2021, 12:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಚ್ಚಿ: ಎರ್ನಾಕುಲಂ ಜಿಲ್ಲೆಯ ಕಿಝಕ್ಕಂಬಳಂ ಪ್ರದೇಶದಲ್ಲಿ ಕ್ರಿಸ್‌ಮಸ್‌ ದಿನದಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 50 ಮಂದಿಯನ್ನು ಬಂಧಿಸಲಾಗಿದ್ದು, ಇಲ್ಲಿಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

ಕಿಝಕ್ಕಂಬಳಂನಲ್ಲಿ ದೇಶದ ಈಶಾನ್ಯ ಭಾಗದಿಂದ ಬಂದ ವಲಸೆ ಕಾರ್ಮಿಕರು ಶನಿವಾರ ರಾತ್ರಿ ಕ್ರಿಸ್‌ಮಸ್‌ ಆಚರಿಸುತ್ತಿದ್ದರು. ಆಚರಣೆಯು ಇದ್ದಕ್ಕಿದ್ದಂತೆ ಹಿಂಸಾಚಾರಕ್ಕೆ ತಿರುಗಿತ್ತು. ಅಲ್ಲಿದ್ದ ಪೊಲೀಸರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿತ್ತು. ಎರಡು ಪೊಲೀಸ್‌ ಜೀಪುಗಳಿಗೆ ಬೆಂಕಿ ಹಚ್ಚಲಾಗಿತ್ತು.

ಹಿಂಸಾಚಾರದಲ್ಲಿ ಎಂಟು ಮಂದಿ ಪೊಲೀಸರು ಮತ್ತು ಒಬ್ಬ ಸರ್ಕಲ್‌ ಇನ್‌ಸ್ಪೆಕ್ಟರ್‌ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಕೊಲೆ ಯತ್ನ ಮತ್ತು ಆಸ್ತಿ ನಾಶ ಪ್ರಕರಣಗಳನ್ನು ದಾಖಲಿಸಿದ್ದು, ಹಿಂಸಾಚಾರದಲ್ಲಿ ಭಾಗವಹಿಸಿದ 50 ವಲಸೆ ಕಾರ್ಮಿಕರನ್ನು ಬಂಧಿಸಿದ್ದಾರೆ.

ADVERTISEMENT

ಹಿಂಸಾಚಾರಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಒಂದು ದೊಡ್ಡ ಗುಂಪು ಪೊಲೀಸ್‌ ವಾಹನಗಳನ್ನು ಸುತ್ತುವರಿದು ಅವುಗಳ ಮೇಲೆ ಹತ್ತಿ ಕಲ್ಲು, ದೊಣ್ಣೆಗಳಿಂದ ಅವುಗಳನ್ನು ಜಖಂಗೊಳಿಸಿದರು. ನಂತರದಲ್ಲಿ ಪೊಲೀಸರ ಒಂದು ಜೀಪಿಗೆ ಬೆಂಕಿ ಹಚ್ಚುತ್ತಿರುವುದು ವಿಡಿಯೊದಲ್ಲಿ ಕಾಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.