ADVERTISEMENT

Kerala ‌Election Results: ಕೇರಳ ಚುನಾವಣಾ ಫಲಿತಾಂಶ, ಮುಖ್ಯಾಂಶಗಳು

​ಪ್ರಜಾವಾಣಿ ವಾರ್ತೆ
Published 2 ಮೇ 2021, 11:36 IST
Last Updated 2 ಮೇ 2021, 11:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕೇರಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮೈತ್ರಿಕೂಟಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಫಲಿತಾಂಶದ ಮುಖ್ಯಾಂಶಗಳು ಮತ್ತು ಲೇಟೆಸ್ಟ್ ಹೈಲೈಟ್ಸ್ ಇಲ್ಲಿವೆ.

* ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್‌ ಮತ್ತೆ ಅಧಿಕಾರಕ್ಕೆ

* 88ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಲ್‌ಡಿಎಫ್‌ಗೆ ಗೆಲುವು ಬಹುತೇಕ ಖಚಿತ

ADVERTISEMENT

* ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಗೆಲುವು ಬಹುತೇಕ ಖಚಿತ

* ‘ಮೆಟ್ರೊ ಮ್ಯಾನ್’ ಖ್ಯಾತಿಯ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್‌ಗೆ ಪಾಲಕ್ಕಾಡ್‌ ಕ್ಷೇತ್ರದಲ್ಲಿ ಸೋಲು, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಫಿ ಪರಂಬಿಲ್‌ಗೆ ಗೆಲುವು

* ಪೂತುಕ್ಕಾಡ್‌ನಲ್ಲಿ ಸಿಪಿಐ (ಎಂ) ಅಭ್ಯರ್ಥಿ ಕೆ.ಕೆ. ರಾಮಚಂದ್ರನ್‌ಗೆ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಅಂತಿಕ್ಕಾಡ್ವಿರುದ್ಧ27,353ಮತಗಳ ಅಂತರದ ಭರ್ಜರಿ ಗೆಲುವು

*ದೇವಿಕುಳಂನಲ್ಲಿ ಸಿಪಿಐ (ಎಂ)ನ ಎಡಿವಿ ಎ ರಾಜಾಗೆ ಗೆಲುವು

* ಕೋಯಿಕ್ಕೋಡ್‌ ದಕ್ಷಿಣ ಕ್ಷೇತ್ರದಲ್ಲಿ ಐಎನ್‌ಎಲ್‌ನ ಅಹ್ಮದ್ ದೇವರ್‌ಕೊಯಿಲ್‌ಗೆ ಜಯ

* ಕಣ್ಣೂರಿನಲ್ಲಿ ಸಚಿವೆ ಕೆ.ಕೆ. ಶೈಲಜಾ ಅವರಿಗೆ60 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.