ADVERTISEMENT

ರಾಜ್ಯಪಾಲ ಆರಿಫ್‌ರಿಂದ ವಿವಿಗಳ ಕೇಸರಿಕರಣ: ಕೇರಳ ಉನ್ನತ ಶಿಕ್ಷಣ ಸಚಿವೆ ಬಿಂದು

ಪಿಟಿಐ
Published 23 ಮೇ 2024, 14:15 IST
Last Updated 23 ಮೇ 2024, 14:15 IST
ಆರಿಫ್‌ ಮೊಹಮ್ಮದ್‌ ಖಾನ್‌ 
ಆರಿಫ್‌ ಮೊಹಮ್ಮದ್‌ ಖಾನ್‌    

ತಿರುವನಂತಪುರ: ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಕೇರಳದ ವಿಶ್ವವಿದ್ಯಾಲಯಗಳನ್ನು ಕೇಸರಿಕರಣಗೊಳಿಸಲು ದೊಡ್ಡ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವೆ ಆರ್‌. ಬಿಂದು ಅವರು ಗುರುವಾರ ಆರೋಪಿಸಿದ್ದಾರೆ. 

ವಿಶ್ವವಿದ್ಯಾಲಯಗಳ ಸೆನೆಟ್‌ಗೆ ಆರಿಫ್‌ ಅವರು ಮಾಡಿದ್ದ ನಾಮನಿರ್ದೇಶನಗಳನ್ನು ರದ್ದುಗೊಳಿಸಿ, ಆರು ವಾರಗಳಲ್ಲಿ ಹೊಸದಾಗಿ ನಾಮನಿರ್ದೇಶನ ಮಾಡುವಂತೆ ಕೇರಳ ಹೈಕೋರ್ಟ್‌ ಈಚೆಗೆ ನೀಡಿದ ಆದೇಶವನ್ನು ಉಲ್ಲೇಖಿಸಿ ಬಿಂದು ಅವರು ಈ ಆರೋಪ ಮಾಡಿದ್ದಾರೆ. 

ಹೈಕೋರ್ಟ್‌ ತೀರ್ಪನ್ನು ಸ್ವಾಗತಿಸಿದ ಬಿಂದು, ‘ಕುಲಾಧಿಪತಿ ನಾಮನಿರ್ದೇನ ಮಾಡಿರುವ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿಲ್ಲ. ಅವರು ಕಲೆ, ವಿಜ್ಞಾನ ಹಾಗೂ ಕ್ರೀಡೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿಲ್ಲ. ಎಬಿವಿಪಿ ಸದಸ್ಯರೆಂಬ ಕಾರಣಕ್ಕೆ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು’ ಎಂದರು. 

ADVERTISEMENT

ಆರಿಫ್‌ ಅವರು ಹಲವು ವಿಷಯಗಳಲ್ಲಿ ಮಧ್ಯಪ್ರವೇಶ ಮಾಡುತ್ತಿರುವುದು ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆ ಹಾಳಾಗಲು ಕಾರಣವಾಗಿದೆ. ಅವರು ಮಧ್ಯಪ್ರವೇಶ ಮಾಡುತ್ತಿರುವುದು ಸರಿಯಲ್ಲ ಎಂಬುದನ್ನು ನ್ಯಾಯಾಲಯದ ತೀರ್ಪುಗಳು ಸಾಬೀತುಪಡಿಸಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.