ADVERTISEMENT

ಕೇರಳ: ಆಸ್ಪತ್ರೆಗೆ ಭೇಟಿ ನೀಡಲು ಮಾಸ್ಕ್ ಕಡ್ಡಾಯ

ಪಿಟಿಐ
Published 27 ಜೂನ್ 2024, 16:23 IST
Last Updated 27 ಜೂನ್ 2024, 16:23 IST
ಮಾಸ್ಕ್
ಮಾಸ್ಕ್   

ತಿರುವನಂತಪುರ: ಶೀತ, ಜ್ವರದ ಜೊತೆಗೆ ಡೆಂಗೆ ಮತ್ತು ಎಚ್‌1ಎನ್‌‌1 ಅಂತಹ ಸಾಂಕ್ರಾಮಿಕ ರೋಗಗಳು ವ್ಯಾಪಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಆಸ್ಪತ್ರೆಗೆ ಭೇಟಿ ನೀಡುವವರು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ಕೇರಳ ಸರ್ಕಾರ ಆದೇಶಿಸಿದೆ.

ಹಕ್ಕಿಜ್ವರ ಭೀತಿ ಕಾಣಿಸುವ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖೆಯು ಎಚ್ಚರಿಕೆ ನೀಡಿದೆ. ಕ್ರಿಪ್ರ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ತಂದೆ–ತಾಯಿಯರು ಮಕ್ಕಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಚೇತರಿಕೆ ಕಾಣುವವರೆಗೆ ಶಾಲೆಗಳಿಗೆ ಕಳುಹಿಸಬಾರದು ಎಂದು ಸಲಹೆ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.