ಕೊಚ್ಚಿ: ಮಗುವಿಗೆ ಅನ್ನಪ್ರಾಶನ ಮಾಡಲು ಶಬರಿಮಲೆಗೆ ಆಗಮಿಸಿದ ಮಹಿಳೆಗೆ ತಡೆಯೊಡ್ಡಿದ ಪ್ರಕರಣದಲ್ಲಿಬಿಜೆಪಿ ನೇತಾರ, ಕೇರಳ ರಾಜ್ಯಪ್ರಧಾನ ಕಾರ್ಯದರ್ಶಿಕೆ.ಸುರೇಂದ್ರನ್‍ಗೆ ಕೇರಳ ಹೈಕೋರ್ಟ್ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ.ಪತ್ತನಂತಿಟ್ಟ ಜಿಲ್ಲೆಗೆ ಪ್ರವೇಶಿಸಬಾರದು, ಇಬ್ಬರು ವ್ಯಕ್ತಿಗಳ ಜಾಮೀನು ಮತ್ತು 2 ಲಕ್ಷ ಶ್ಯೂರಿಟಿ ನೀಡಬೇಕು ಎಂಬ ನ್ಯಾಯಾಲಯ ಸುರೇಂದ್ರನ್‍ಗೆ ಆದೇಶಿಸಿದೆ.
23 ದಿನಗಳ ಜೈಲುವಾಸದ ನಂತರ ಜಾಮೀನು ಪಡೆದು ಸುರೇಂದ್ರನ್ ಇಂದು ಬಂಧಮುಕ್ತವಾಗಲಿದ್ದಾರೆ.
ಸುರೇಂದ್ರನ್ ಅವರು ಸುಪ್ರೀಂಕೋರ್ಟ್ ತೀರ್ಪು ಪಾಲಿಸಿಲ್ಲ. ಅವರನ್ನು ಎಷ್ಟು ದಿನಗಳ ಕಾಲ ಜೈಲಿನಲ್ಲಿಡುತ್ತೀರಾ? ಅವರೊಬ್ಬರೇನಾ ಆ ಪಕ್ಷದಲ್ಲಿರುವುದು ಎಂದು ವಿಚಾರಣೆ ವೇಳೆ ಹೈಕೋರ್ಟ್ ಕೇರಳ ಸರ್ಕಾರವನ್ನು ಪ್ರಶ್ನಿಸಿದೆ.
ಕಳೆದ ತಿಂಗಳು 17ರಂದು ಬಂಧಿತನಾದ ಸುರೇಂದ್ರನ್‍ಗೆ ರಾನ್ನಿ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು.
ಚಿತ್ತಿರಆಟ್ಟ ವಿಶೇಷ ದಿನದಂದು ಶಬರಿಮಲೆಗೆ ಆಗಮಿಸಿದ 52ರಹರೆಯದ ಮಹಿಳೆಯ ವಿರುದ್ಧ ನಡೆದ ಪ್ರತಿಭಟನೆ ಪಿತೂರಿಯಿಂದ ಕೂಡಿತ್ತು. ಅದರಲ್ಲಿ ಸುರೇಂದ್ರನ್ ಭಾಗಿಯಾಗಿದ್ದಾರೆ ಎಂದು ಆರೋಪವಿದೆ.
ಕೋಯಿಕ್ಕೋಡ್‍ನಲ್ಲಿ 2013ರಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆದ ರೈಲು ತಡೆ ಮುಷ್ಕರ, 2016ರಲ್ಲಿ ಸಿಟಿ ಪೊಲೀಸ್ ಆಯುಕ್ತರ ಕಚೇರಿಗೆ ನಡೆಸಿದ ಮಾರ್ಚ್ ಈ ಎರಡು ಪ್ರಕರಣಗಳಲ್ಲಿ ಸುರೇಂದ್ರನ್‌ಗೆ ಜಾಮೀನು ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.