ADVERTISEMENT

ವಯನಾಡು ಭೂಕುಸಿತ: ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ 40 ತಂಡಗಳು

ಪಿಟಿಐ
Published 2 ಆಗಸ್ಟ್ 2024, 4:18 IST
Last Updated 2 ಆಗಸ್ಟ್ 2024, 4:18 IST
<div class="paragraphs"><p>ವಯನಾಡಿನಲ್ಲಿ ಭೂಕುಸಿತ</p></div>

ವಯನಾಡಿನಲ್ಲಿ ಭೂಕುಸಿತ

   

(ಪಿಟಿಐ ಚಿತ್ರ)

ವಯನಾಡು (ಕೇರಳ): ಭೂಕುಸಿತ ಪೀಡಿತ ವಯನಾಡು ಪ್ರದೇಶದಲ್ಲಿ ನಾಲ್ಕನೇ ದಿನವಾದ ಇಂದು (ಶುಕ್ರವಾರ) ಸುಮಾರು 40 ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

190 ಅಡಿ ಉದ್ದದ ಬೈಲಿ ಸೇತುವೆ(ತಾತ್ಕಾಲಿಕ ಉಕ್ಕಿನ ಸೇತುವೆ) ಪೂರ್ಣಗೊಂಡಿದ್ದು, ಇಂದು (ಶುಕ್ರವಾರ) ಮುಂಜಾನೆಯಿಂದ ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ವೇಗ ಪಡೆದುಕೊಂಡಿದೆ. ಇದರಿಂದಾಗಿ ಭೂಕುಸಿತದಿಂದ ಹೆಚ್ಚು ಬಾಧಿತ ಪ್ರದೇಶಗಳಾದ ಚೂರಲ್‌ಮಲ ಮತ್ತು ಮುಂಡಕ್ಕೈ ಪ್ರದೇಶಗಳಿಗೆ ಅಗೆಯುವ ಯಂತ್ರಗಳು ಮತ್ತು ಆಂಬುಲೆನ್ಸ್‌ ಸೇರಿದಂತೆ ಭಾರಿ ಯಂತ್ರಗಳ ಚಲನೆಗೆ ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಭೂಕುಸಿತ ಪೀಡಿತ ಪ್ರದೇಶಗಳಾದ ಅಟ್ಟಮಲ ಮತ್ತು ಆರನ್ಮಲ, ಮುಂಡಕ್ಕೈ, ಪುಂಚಿರಿಮಟ್ಟಂ, ವೆಳ್ಳರಿಮಲ ಗ್ರಾಮ, ಜಿವಿಎಚ್‌ಎಸ್‌ಎಸ್‌ ವೆಳ್ಳರಿಮಲ ಮತ್ತು ನದಿ ತೀರಗಳು ಸೇರಿದಂತೆ ಒಟ್ಟು ಆರು ವಲಯಗಳಲ್ಲಿ 40 ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಈ ಜಂಟಿ ತಂಡಗಳು ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ನೌಕಾಪಡೆ, ರಕ್ಷಣಾ ಬೆಂಬಲ ಗುಂಪು (ಡಿಎಸ್‌ಜಿ) ಕೋಸ್ಟ್‌ ಗಾರ್ಡ್‌, ಎಂಇಜಿ ಸಿಬ್ಬಂದಿ, ಮೂವರು ಸ್ಥಳೀಯರು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.