ಕೊಲ್ಲಂ (ಕೇರಳ): ವಯನಾಡ್‌ನಲ್ಲಿನ ದುರಂತಕ್ಕೆ ಮಿಡಿದು, ದಕ್ಷಿಣ ಕೇರಳದಲ್ಲಿ ಚಹಾ ಅಂಗಡಿ ಇಟ್ಟು ಜೀವನ ಸಾಗಿಸುತ್ತಿರುವ ವೃದ್ಧೆಯೊಬ್ಬರು ಅವರ ಬಳಿ ಇದ್ದ ಅಲ್ಪಸ್ವಲ್ಪ ಉಳಿತಾಯದ ಹಣ ಮತ್ತು ಪಿಂಚಣಿ ಹಣವನ್ನು ದೇಣಿಗೆಯಾಗಿ ಮುಖ್ಯಮಂತ್ರಿ ಅವರ ವಿಪತ್ತು ಪರಿಹಾರ ನಿಧಿಗೆ ನೀಡಿದ್ದಾರೆ.
ಪಲ್ಲಿತೊಟ್ಟಂನ ಸುಬೈದಾ ಮತ್ತು ಅವರ ಪತಿ ದೇಣಿಗೆಯಾಗಿ ₹10,000 ನೀಡಿದ್ದಾರೆ.
‘ಸಾಲದ ಬಡ್ಡಿ ಪಾವತಿಸಲು ಬ್ಯಾಂಕಿನಿಂದ ಹಣ ತಂದಿಟ್ಟುಕೊಂಡಿದ್ದೆವು. ಭೂಕುಸಿತದಿಂದ ಎಲ್ಲವನ್ನೂ ಕಳೆದುಕೊಂಡವರಿಗೆ ನೆರವಿನ ಅಗತ್ಯವಿದೆ ಎಂದು ಟಿ.ವಿ ಚಾನಲ್‌ನಲ್ಲಿ ಹೇಳುತ್ತಿರುವುದನ್ನು ಕೇಳಿದೆವು. ತಕ್ಷಣವೇ ನನ್ನ ಪತಿ, ‘ನಮ್ಮ ಬಳಿ ಇರುವ ಹಣವನ್ನು ಜಿಲ್ಲಾಧಿಕಾರಿಗಳಿಗೆ ನೀಡೋಣ. ಆನಂತರ ಬಡ್ಡಿ ಕಟ್ಟಿದರಾಯಿತು. ಈಗ ಸಹಾಯ ಮಾಡುವುದು ಮುಖ್ಯ’ ಎಂದರು. ಕೂಡಲೇ ಜಿಲ್ಲಾಧಿಕಾರಿಗಳಿಗೆ ಹಣ ನೀಡಿದೆ. ವಯನಾಡ್‌ಗೆ ತೆರಳಿ ಸಹಾಯ ಮಾಡಲು ನಮ್ಮಿಂದ ಸಾಧ್ಯವಾಗುವುದಿಲ್ಲ’ ಎಂದು ಸುಬೈದಾ ಅವರು ಹೇಳಿದರು.
‘ಇದಕ್ಕೂ ಮುನ್ನ ಕೂಡ ಪ್ರವಾಹ ಪರಿಹಾರ ಕಾರ್ಯಗಳಿಗೆಂದು ನನ್ನ ಬಳಿ ಇದ್ದ ನಾಲ್ಕು ಮೇಕೆಗಳನ್ನು ಮಾರಾಟ ಮಾಡಿದ್ದೆ’ ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.