ADVERTISEMENT

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಧಾಕೃಷ್ಣನ್

ಕೇರಳದಿಂದ ಜಯಗಳಿಸಿರುವ ಎಲ್‌ಡಿಎಫ್‌ನ ಏಕೈಕ ಅಭ್ಯರ್ಥಿ

ಪಿಟಿಐ
Published 18 ಜೂನ್ 2024, 14:53 IST
Last Updated 18 ಜೂನ್ 2024, 14:53 IST
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಂಗಳವಾರ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ ಸಿಪಿಎಂನ ಹಿರಿಯ ನಾಯಕ ಕೆ.ರಾಧಾಕೃಷ್ಣನ್
–ಪಿಟಿಐ ಚಿತ್ರ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಂಗಳವಾರ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ ಸಿಪಿಎಂನ ಹಿರಿಯ ನಾಯಕ ಕೆ.ರಾಧಾಕೃಷ್ಣನ್ –ಪಿಟಿಐ ಚಿತ್ರ   

ತಿರುವನಂತಪುರ: ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿರುವ ಎಲ್‌ಡಿಎಫ್‌ನ ಏಕೈಕ ಅಭ್ಯರ್ಥಿ, ಸಿಪಿಎಂನ ಹಿರಿಯ ನಾಯಕ ಕೆ.ರಾಧಾಕೃಷ್ಣನ್ ಅವರು ಮಂಗಳವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆಲತ್ತೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರುವ ಅವರು ದೇವಸ್ವಂ, ಎಸ್‌ಸಿ–ಎಸ್‌ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಸಿಪಿಎಂನ ಕೇಂದ್ರ ಸಮಿತಿ ಸದಸ್ಯರೂ ಆಗಿರುವ ರಾಧಾಕೃಷ್ಣನ್‌ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಿದರು.

ADVERTISEMENT

‘ಸಚಿವನಾಗಿ ಜನರಿಗೆ ಹೆಚ್ಚಿನ ಸೇವೆ ಸಲ್ಲಿಸಿದ್ದೇನೆ. ತೃಪ್ತಿಯಿಂದ ರಾಜೀನಾಮೆ ನೀಡಿರುವೆ’ ಎಂದು ವರದಿಗಾರರಿಗೆ ತಿಳಿಸಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ರಾಧಾಕೃಷ್ಣನ್ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ಬುಡಕಟ್ಟು ಕುಟುಂಬಗಳು ವಾಸಿಸುವ ಸ್ಥಳಗಳಿಗೆ ‘ಕಾಲೊನಿ’, ‘ಸಂಕೇತ’ ಮತ್ತು ‘ಊರು’ ಎಂಬ ಪದಗಳನ್ನು ಬಳಸದಂತೆ ಸೂಚಿಸಿದ್ದಾರೆ. ಇವುಗಳ ಬದಲಿಗೆ ‘ನಗರ’, ‘ಉನ್ನತಿ’, ‘ಪ್ರಕೃತಿ’ ಪದಗಳನ್ನು ಬಳಸುವಂತೆ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.