ಕೋಯಿಕ್ಕೋಡ್: ಅಫ್ಗಾನಿಸ್ತಾನ ಜನತೆಯ ವಿರುದ್ಧ ತಾಲಿಬಾನ್ ನಡೆಸಿದ ಕ್ರೌರ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದ ಮುಸ್ಲಿಂ ಲೀಗ್ ಶಾಸಕ ಎಂ.ಕೆ.ಮುನೀರ್ ಅವರಿಗೆ ಬುಧವಾರ ಅನಾಮಧೇಯ ಬೆದರಿಕೆ ಪತ್ರವೊಂದು ಬಂದಿದೆ.
‘ತಾಲಿಬಾನ್– ಒಂದು ವಿಸ್ಮಯ’ ಎಂಬ ಹೆಸರಿನಲ್ಲಿ ಬುಧವಾರ ಬೆಳಿಗ್ಗೆ ಶಾಸಕರಿಗೆ ಈ ಪತ್ರ ಬಂದಿದೆ. ಇನ್ನು 24 ಗಂಟೆಗಳಲ್ಲಿ ತಾಲಿಬಾನ್ ವಿರೋಧಿ ಪೋಸ್ಟ್ ಅನ್ನು ಫೇಸ್‌ಬುಕ್‌ನಿಂದ ತೆಗೆದುಹಾಕದಿದ್ದರೆ ಅವರು ಮತ್ತು ಅವರ ಕುಟುಂಬದವರನ್ನು ಇಲ್ಲವಾಗಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಾಸಕರು ಹೇಳಿದರು.
ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರದೇಶದಿಂದ ಪತ್ರ ಪೋಸ್ಟ್ ಮಾಡಲಾಗಿದೆ. ಧರ್ಮನಿಂದೆಯ ಆರೋಪದಲ್ಲಿ 2010ರಲ್ಲಿ ಕೈ ತುಂಡಾದ ಪ್ರೊ.ಟಿ.ಕೆ.ಜೋಸೆಫ್ ಅವರ ಸ್ಥಿತಿ ತಮಗೂ ಬರಲಿದೆ ಎಂದು ಮುನೀರ್ ಅವರಿಗೆ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಮುನೀರ್ ಹೇಳಿದ್ದಾರೆ.
ಇವನ್ನೂ ಓದಿ
*ಅಫ್ಗಾನ್ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಜಿ7 ಸಭೆ ಕರೆದ ಬ್ರಿಟನ್ ಪ್ರಧಾನಿ ಬೋರಿಸ್
*ಕಾಬೂಲ್: ಬೆದರಿಕೆಯ ನಡುವೆಯೂ ಹೆಚ್ಚಿನ ಜನರನ್ನು ಸ್ಥಳಾಂತರಿಸಿದ ಅಮೆರಿಕ
*ಹತ್ತಾರು ತಾಲಿಬಾನಿಗಳನ್ನು ಕೊಂದು ಪಂಜ್ಶೇರ್ ಪ್ರಾಂತ್ಯ ವಶಕ್ಕೆ ಪಡೆದ ವಿರೋಧಿ ಪಡೆ
*ತೆರವು: ಗಡುವು ಮೀರಿದರೆ ಎಚ್ಚರ
*ಅಫ್ಗಾನಿಸ್ತಾನದಲ್ಲಿ ಮಾನವೀಯತೆಗೆ ಬಹುದೊಡ್ಡ ಸವಾಲು ಎದುರಾಗಲಿದೆ; ಯುನಿಸೆಫ್
*ಅಫ್ಗನ್ಗೆ ಔಷಧ ಪರಿಕರ ಪೂರೈಕೆ ಇನ್ನಷ್ಟು ವಿಳಂಬ
*ತಾಲಿಬಾನ್ ಮೂಲಭೂತವಾದದ ಕಡುವಿರೋಧಿ ಪಾಪ್ ತಾರೆ ಅಫ್ಗಾನಿಸ್ತಾನದಿಂದ ಪಲಾಯನ
*ಅಫ್ಗನ್ ತೊರೆವ ಧಾವಂತ: 7 ಬಲಿ
*ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅಫ್ಗಾನಿಸ್ತಾನಕ್ಕೆ ಮರಳಬಹುದು: ತಾಲಿಬಾನ್
*ಆಫ್ಗಾನ್ನಿಂದ ಸೇನೆ ಹಿಂತೆಗೆತ ತಾರ್ಕಿಕ ಮತ್ತು ಸರಿಯಾದ ನಿರ್ಧಾರ: ಬೈಡನ್
*ಅಫ್ಗಾನ್ ತಾಲಿಬಾನ್ ವಶವಾಗಲು ಪಾಕ್ ಗುಪ್ತಚರ ಸಂಸ್ಥೆ ಕೈವಾಡ: ಅಮೆರಿಕ ಸಂಸದ
*ಕಾಬೂಲ್ನಿಂದ ಜನರ ಸ್ಥಳಾಂತರ ಪ್ರಕ್ರಿಯೆ ಇನ್ನಷ್ಟು ತ್ವರಿತ: ಜೋ ಬೈಡನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.