ತಿರುವನಂತಪುರ: ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಎನ್‌ಡಿಎ ಅಭ್ಯರ್ಥಿ ತುಶಾರ್ ವೇಳಾಪಲ್ಲಿ ಅವರನ್ನು ವಂಚನೆ ಪ್ರಕರಣದಲ್ಲಿ ಯುಎಇ ಪೊಲೀಸರು ಬಂಧಿಸಿದ್ದಾರೆ.
ತುಶಾರ್ ಅವರ ಒಡೆತನದ ನಿರ್ಮಾಣ ಸಂಸ್ಥೆಯು ಯುಎಇಯಲ್ಲೂ ವಹಿವಾಟು ನಡೆಸುತ್ತಿತ್ತು. ಆದರೆ ನಷ್ಟದ ಕಾರಣ ಅಲ್ಲಿ ವ್ಯವಹಾರವನ್ನು ಸ್ಥಗಿತಗೊಳಿಸಿತ್ತು. ಅಲ್ಲಿನ ಕೆಲವು ಸಂಸ್ಥೆಗಳಿಗೆ ಅವರು ಸುಮಾರು ₹ 20 ಕೋಟಿಯಷ್ಟು ಬಾಕಿ ಪಾವತಿಸಿಬೇಕಿತ್ತು. ಅವರು ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧವೇ ಮಾತುಕತೆ ನಡೆಸಲು ಅವರು ಯುಎಇಗೆ ತೆರಳಿದ್ದರು. ಆಗ ಅವರನ್ನು ಬಂಧಿಸಲಾಗಿದೆ.
ತುಶಾರ್ ಅವರ ಬಿಡುಗಡೆಗೆ ನೆರವು ನೀಡುವಂತೆ ಕೋರಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.