ADVERTISEMENT

ಕೇರಳ: ಅಳುತ್ತಿದ್ದ ಮಗುವಿಗೆ ಎದೆ ಹಾಲುಣಿಸಿ ಮಮತೆ ತೋರಿದ ಪೊಲೀಸ್ ಅಧಿಕಾರಿ

ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಮಗುವಿಗೆ ಹಾಲುಣಿಸಿದ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಎ ಆರ್ಯ– ತಾಯಿ ಹೃದಯಕ್ಕೆ ಪ್ರಶಂಸೆ.

ಪಿಟಿಐ
Published 24 ನವೆಂಬರ್ 2023, 10:00 IST
Last Updated 24 ನವೆಂಬರ್ 2023, 10:00 IST
<div class="paragraphs"><p> ಮಗುವಿಗೆ ಹಾಲುಣಿಸುತ್ತಿರುವ&nbsp;ಸಿವಿಲ್ ಪೊಲೀಸ್ ಅಧಿಕಾರಿ ಎಂ.ಎ ಆರ್ಯ</p></div>

ಮಗುವಿಗೆ ಹಾಲುಣಿಸುತ್ತಿರುವ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಎ ಆರ್ಯ

   

(ಚಿತ್ರ ಕೃಪೆ –ಎಕ್ಸ್‌)

ಕೊಚ್ಚಿ: ಕೇರಳದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಟ್ನಾ ಮೂಲದ ಮಹಿಳೆಯ ಮಗುವಿಗೆ ಕೊಚ್ಚಿಯ ಮಹಿಳಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಎ ಆರ್ಯ ಅವರು ಹಾಲುಣಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ADVERTISEMENT

ಪೊಲೀಸ್‌ ಮೂಲಗಳ ಪ್ರಕಾರ, ಬಿಹಾರದ ಪಾಟ್ನಾದ ಮಹಿಳೆ ತನ್ನ ಪತಿ ಮತ್ತು ನಾಲ್ಕು ಮಕ್ಕಳೊಂದಿಗೆ ಕೆಲವು ಸಮಯದಿಂದ ಕೇರಳದಲ್ಲಿ ನೆಲೆಸಿದ್ದಾರೆ. ಸದ್ಯ ಮಹಿಳೆಯ ಪತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾನೆ.

ಈ ಸಂದರ್ಭದಲ್ಲಿ ಮಹಿಳೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ತನ್ನ 4 ಮಕ್ಕಳೊಂದಿಗೆ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಬಂದಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.

ಆಕೆಯ ನಾಲ್ವರು ಮಕ್ಕಳು ವಾರ್ಡ್‌ನಿಂದ ಹೊರಗಿದ್ದರು. ಅವರಲ್ಲಿ ಒಂದು ಮಗು ನಾಲ್ಕು ತಿಂಗಳ ಹಸಿಗೂಸಾಗಿದ್ದು, ತಾಯಿಯ ಪಕ್ಕದಲ್ಲೇ ಮಲಗಿಸಲಾಗಿತ್ತು. ಹಸಿವಿನಿಂದ ಅಳುತ್ತಿದ್ದ ಆ ಮಗುವನ್ನು ಕಂಡ 9 ತಿಂಗಳ ಮಗುವಿನ ತಾಯಿ, ಪೊಲೀಸ್‌ ಅಧಿಕಾರಿ ಆರ್ಯ ಹಾಲುಣಿ ಹಸಿವು ನೀಗಿಸಿದ್ದಾರೆ. ಆರ್ಯ ಅವರ ಈ ಕಾರ್ಯಕ್ಕೆ ನಗರ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅವರನ್ನು ಶಿಶುಪಾಲನಾ ಕೇಂದ್ರಕ್ಕೆ ಕರೆತರಲಾಗಿದೆ' ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.