ADVERTISEMENT

ಕೇರಳ ಲಾಟರಿ: 3ರ ಟಿಕೆಟ್‌, ಹರಿದು ಬಂತು ₹162 ಕೋಟಿ, ಗೆದ್ದವನಿಗೆ ₹6.50 ಕೋಟಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2021, 16:51 IST
Last Updated 19 ಸೆಪ್ಟೆಂಬರ್ 2021, 16:51 IST
ಸಾಂದರ್ಭಿಕ ಚಿತ್ರ (ಐಸ್ಟಾಕ್‌ ಫೋಟೊ)
ಸಾಂದರ್ಭಿಕ ಚಿತ್ರ (ಐಸ್ಟಾಕ್‌ ಫೋಟೊ)   

ತಿರುವನಂತಪುರ: ಕೇರಳ ಸರ್ಕಾರದ ಓಣಂ ಬಂಪರ್‌ ಲಾಟರಿ ಫಲಿತಾಂಶ ಭಾನುವಾರ ಹೊರಬಿದ್ದಿದೆ. ₹12 ಕೋಟಿ ಬಹುಮಾನ ಪಡೆದ ಅದೃಷ್ಟಶಾಲಿ ಯಾರೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಬಂಪರ್‌ ಬಹುಮಾನ ಗೆದ್ದ ಅದೃಷ್ಟಶಾಲಿಯ ಟಿಕೆಟ್‌ ಸಂಖ್ಯೆ ಟಿಇ 645465. ಇದು ಕೊಚ್ಚಿ ಸಮೀಪದ ತ್ರಿಪುನಿತುರದಲ್ಲಿ ಮಾರಾಟವಾಗಿದ್ದಾಗಿದೆ. ವಿಜೇತರಿಗೆ ತೆರಿಗೆ ಮತ್ತು ಏಜೆಂಟ್‌ ಕಮಿಷನ್‌ ಎಲ್ಲ ಕಳೆದು ₹6.50 ಕೋಟಿ ಸಿಗಲಿದೆ. ದ್ವಿತೀಯ ಬಹುಮಾನವಾಗಿ ಆರು ಮಂದಿಗೆ ತಲಾ ₹1 ಕೋಟಿ ಬಹುಮಾನ ದೊರೆಯಲಿದೆ.

ಕೇರಳದ ವಿತ್ತ ಸಚಿವ ಕೆ.ಎನ್‌. ಬಾಲಗೋಪಾಲ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಾಟರಿ ಟಿಕೆಟ್‌ ವಿಜೇತರಿಗೆ ನಿಧಿ ನಿರ್ವಹಣೆ ತಂಡವು ವಿಶೇಷ ತರಬೇತಿ ನೀಡಲಿದೆ ಎಂದು ಬಾಲಗೋಪಾಲ ತಿಳಿಸಿದ್ದಾರೆ.

ADVERTISEMENT

ಒಟ್ಟು 54 ಲಕ್ಷ ಓಣಂ ಬಂಪರ್‌ ಲಾಟರಿ ಟಿಕೆಟ್‌ಗಳು ಮಾರಾಟಗೊಂಡಿವೆ. ಇದರಿಂದ ಪ್ರಸಕ್ತ ವರ್ಷ ಒಟ್ಟು ₹162 ಕೋಟಿ ಹರಿದುಬಂದಿದೆ. ಕಳೆದ ವರ್ಷ ಸುಮಾರು ₹44 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಒಂದು ಲಾಟರಿ ಟಿಕೆಟ್‌ನ ಬೆಲೆ ₹3 ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.