ADVERTISEMENT

ಪಾಲಕ್ಕಾಡ್ ರೈಲ್ವೆ ವಲಯ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ: ಪ್ರತಿರೋಧ

ಪಿಟಿಐ
Published 12 ಮೇ 2024, 15:47 IST
Last Updated 12 ಮೇ 2024, 15:47 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ತಿರುವನಂತಪುರ: ಪಾಲಕ್ಕಾಡ್ ರೈಲ್ವೆ ವಲಯವನ್ನು ಕೇಂದ್ರ ಸರ್ಕಾರ ಮುಚ್ಚಲು ನಿರ್ಧರಿಸಿದೆ ಎಂಬ ವರದಿ ಕುರಿತು ಕೇರಳ ಸರ್ಕಾರ ತೀವ್ರ ಪ್ರತಿಭಟನೆ ದಾಖಲಿಸಿದೆ. ದಕ್ಷಿಣ ರಾಜ್ಯದ ವಿರುದ್ಧ ಕೇಂದ್ರ ಸರ್ಕಾರದ ಸೇಡಿನ ರಾಜಕಾರಣ ಮತ್ತು ನಿರ್ಲಕ್ಷ್ಯಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಆರೋಪಿಸಿದೆ. 

ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯ ರೈಲ್ವೆ ಸಚಿವ ವಿ. ಅಬ್ದುರಹಿಮಾನ್, ಪಾಲಕ್ಕಾಡ್ ರೈಲ್ವೆ ವಲಯವನ್ನು ಮುಚ್ಚುವ ತೀರ್ಮಾನ ಹಿಂಪಡೆಯಬೇಕು ಎಂದು ಕೋರಿದ್ದಾರೆ. 

ADVERTISEMENT

ಪ್ರಯಾಣಿಕರ ಸಂಖ್ಯೆ ಮತ್ತು ವರಮಾನ ವಿಚಾರದಲ್ಲಿ ಪಾಲಕ್ಕಾಡ್ ವಲಯವು ತುಂಬಾ ಮುಂದಿದೆ. ಯಾವುದೇ ಕಾರಣ ನೀಡದೆ, ಮುಚ್ಚುವ ನಿರ್ಧಾರವು ರಾಜ್ಯ ಸರ್ಕಾರದ ವಿರುದ್ಧವಾದದ್ದು. ರೈಲ್ವೆ ಅಭಿವೃದ್ಧಿ ವಿಚಾರದಲ್ಲಿ ಕೇರಳವನ್ನು ನಿರಂತರವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದೂ ಅವರು ದೂರಿದರು. 

ಈ ಹಿಂದೆಯೂ ಪಾಲಕ್ಕಾಡ್ ವಲಯವನ್ನು ಮಂಗಳೂರು ವಲಯಕ್ಕೆ ಸೇರಿಸಲು ಕೇಂದ್ರ ಸರ್ಕಾರ ಯತ್ನಿಸಿತ್ತು. ಆದರೆ, ಕೇರಳ ಸರ್ಕಾರ ತೀವ್ರ ಪ್ರತಿರೋಧ ಒಡ್ಡಿದ್ದರಿಂದಾಗಿ ಈ ತೀರ್ಮಾನವನ್ನು ಹಿಂಪಡೆದಿತ್ತು ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.