ADVERTISEMENT

ಶಬರಿಮಲೆ ಮಂಡಲ ಪೂಜೆ: ಜನಸಂದಣಿ ನಿರ್ವಹಣೆಗೆ ಖಾಕಿ ಪಡೆ ಸನ್ನದ್ಧ

ಪಿಟಿಐ
Published 19 ಡಿಸೆಂಬರ್ 2023, 12:57 IST
Last Updated 19 ಡಿಸೆಂಬರ್ 2023, 12:57 IST
<div class="paragraphs"><p>ಶಬರಿಮಲೆ ದೇವಸ್ಥಾನ</p></div>

ಶಬರಿಮಲೆ ದೇವಸ್ಥಾನ

   

(ಚಿತ್ರ ಕೃಪೆ–ಪಿಟಿಐ)

ಶಬರಿಮಲೆ (ಕೇರಳ): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 27ರಂದು ನಡೆಯುವ ಮಂಡಲ ಪೂಜೆಯ ಸಂದರ್ಭದಲ್ಲಿ ಜನಸಂದಣಿ ನಿರ್ವಹಿಸಲು ಸಜ್ಜುಗೊಂಡಿರುವುದಾಗಿ ಕೇರಳ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಇನ್ನೂ 500ಕ್ಕೂ ಹೆಚ್ಚು ಪೊಲೀಸರು ದೇಗುಲಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮಂಡಲ ಪೂಜೆಗೆ ಒಟ್ಟು 2,700 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ' ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸದ್ಯ ಪೊಲೀಸ್, ಆರ್‌ಆರ್‌ಎಫ್, ಬಾಂಬ್ ಸ್ಕ್ವಾಡ್, ಸಿಆರ್‌ಪಿಎಫ್ ಮತ್ತು ಎನ್‌ಡಿಆರ್‌ಎಫ್ ಸೇರಿದಂತೆ ವಿವಿಧ ಇಲಾಖೆಗಳ 2,150 ಮಂದಿ ಸಿಬ್ಬಂದಿ ದೇಗುಲ ಮತ್ತು ಸುತ್ತಮುತ್ತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಂಪಾ ಮತ್ತು ನಿಲಕ್ಕಲ್‌ನಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶಬರಿಮಲೆಯಲ್ಲಿ 750 ಸಿಬ್ಬಂದಿಯ ಕರ್ತವ್ಯ ಮಂಗಳವಾರ ಮುಕ್ತಾಯಗೊಂಡಿದ್ದು, ಹೊಸ ಅಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದಾರೆ. ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಐಜಿ ರಾಹುಲ್ ಆರ್. ನಾಯರ್ ಆಗಮಿಸಿದ ಸಿಬ್ಬಂದಿಯನ್ನು ಸ್ವಾಗತಿಸಿದರು. 'ಹೆಚ್ಚುತ್ತಿರುವ ನೂಕುನುಗ್ಗಲು ನಿಭಾಯಿಸಲು ಪೊಲೀಸರು ಕಾರ್ಯಪ್ರವೃತ್ತರಾಗುವಂತೆ ಹಾಗೂ ಭಕ್ತರ ಬಗ್ಗೆ ಕಾಳಜಿ ವಹಿಸುವಂತೆ' ಅವರು ಸಲಹೆ ನೀಡಿದರು.

10 ತಂಡ ರಚನೆ:

ಜನಸಂದಣಿ ನಿರ್ವಹಣೆಗಾಗಿ 10 ಮಂದಿ ‌‌ಡಿವೈಎಸ್‌ಪಿಗಳು, 35 ಮಂದಿ ಇನ್‌ಸ್ಪೆಕ್ಟರ್‌ಗಳು, 105 ಮಂದಿ ಸಬ್‌ಇನ್‌ಸ್ಪೆಕ್ಟರ್‌ಗಳು ಹಾಗೂ ಮತ್ತು 10 ಮಂದಿ ಎಎಸ್‌ಐಗಳನ್ನು ಒಳಗೊಂಡಂತೆ 10 ತಂಡಗಳನ್ನು ರಚಿಸಲಾಗಿದೆ.

‘ದೇಗುಲಕ್ಕೆ ಬರುವ ಭಕ್ತರು ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಸಹಕರಿಸುವಂತೆ' ವಿಶೇಷ ಅಧಿಕಾರಿ ಕೆ.ಎಸ್ ಸುದರ್ಶನ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.