ADVERTISEMENT

ಜಾರಿದ ಮಿಡಲ್‌ ಬರ್ತ್‌, ಲೋಯರ್‌ನಲ್ಲಿದ್ದ ವ್ಯಕ್ತಿ ಸಾವು; ಲೋಪವಿಲ್ಲ ಎಂದ ರೈಲ್ವೆ

ಪಿಟಿಐ
Published 26 ಜೂನ್ 2024, 15:48 IST
Last Updated 26 ಜೂನ್ 2024, 15:48 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹೈದರಾಬಾದ್‌: ರೈಲಿನ ಕೆಳಗಿನ ಬರ್ತ್‌ನಲ್ಲಿದ್ದ (ಲೋಯರ್‌ ಬರ್ತ್‌) ವ್ಯಕ್ತಿಯ ಮೇಲೆ ಮೇಲಿನ ಬರ್ತ್‌ (ಮಿಡಲ್‌ ಬರ್ತ್‌) ಬಿದ್ದಿದ್ದು, ಗಾಯಗೊಂಡಿದ್ದ ವ್ಯಕ್ತಿಯು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಕೇರಳದ ಅಲಿ ಖಾನ್‌ ಸಿ.ಕೆ. ಎಂದು ಗುರುತಿಸಲಾಗಿದೆ. ಅವರು ತಮ್ಮ ಸ್ನೇಹಿತರೊಂದಿಗೆ ಎರ್ನಾಕುಲಂ – ಹಝರತ್‌ ನಿಜಾಮುದ್ದಿನ್‌ ಮಿಲೇನಿಯಂ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಗ್ರಾಗೆ ಪ್ರಯಾಣ ಬೆಳೆಸಿದ್ದರು. ರೈಲಿನ ಸ್ಲೀಪರ್ ಕೋಚ್‌ನಲ್ಲಿ ಈ ಘಟನೆ ಜೂನ್‌ 16ರಂದು ನಡೆದಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಮೇಲಿನ ಬರ್ತ್‌ನ ಸರಪಳಿಯನ್ನು ಸರಿಯಾಗಿ ಜೋಡಿಸದೆ ಈ ಘಟನೆ ನಡೆದಿದೆ. ಆಗ ರೈಲು ತೆಲಂಗಾಣದ ವಾರಂಗಲ್‌ ಜಿಲ್ಲೆಯಲ್ಲಿ ಸಾಗುತ್ತಿತ್ತು. ಸದ್ಯ ಮೃತಪಟ್ಟಿರುವ ವ್ಯಕ್ತಿಯ ಕುತ್ತಿಗೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಕೂಡಲೇ ಅವರನ್ನು ರಾಮಗುಂಡಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಹೈದರಾಬಾದ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ವೇಳೆಯೇ ಜೂನ್ 24ರಂದು ಮೃತಪಟ್ಟಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೇಲಿನ ಸೀಟಿನಲ್ಲಿದ್ದ ಪ್ರಯಾಣಿಕ ಸರಪಳಿಯನ್ನು ಸರಿಯಾಗಿ ಜೋಡಿಸದ ಕಾರಣ ಸೀಟು ಕಳಚಿ ಬಿದ್ದಿದೆ. ನಿಜಾಮುದ್ದೀನ್‌ ನಿಲ್ದಾಣದಲ್ಲಿ ರೈಲನ್ನು ಪರಿಶೀಲಿಸಿದಾಗ ಸೀಟು ಸುಸ್ಥಿತಿಯಲ್ಲಿತ್ತು ಎಂಬುದು ತಿಳಿದುಬಂದಿದೆ ಎಂದು ರೈಲ್ವೆ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.