ADVERTISEMENT

ಕೇರಳದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕೇಂದ್ರವೇ ಕಾರಣ: ಸಚಿವ

ಪಿಟಿಐ
Published 24 ಜೂನ್ 2024, 13:42 IST
Last Updated 24 ಜೂನ್ 2024, 13:42 IST
ಕೆ.ಎನ್‌. ಬಾಲಗೋಪಾಲ್‌
ಕೆ.ಎನ್‌. ಬಾಲಗೋಪಾಲ್‌   

ತಿರುವನಂತಪುರ: ದೇಶದ ಸಂಯುಕ್ತ ರಚನೆಗೆ ವಿರುದ್ಧವಾದ ನಿಲುವನ್ನು ಕೇಂದ್ರ  ಸರ್ಕಾರ ತಳೆದಿದೆ. ಇದೇ ಕಾರಣದಿಂದಲೇ ಕೇರಳದಲ್ಲಿ ಕೃತಕ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಕೇರಳದ ಹಣಕಾಸು ಸಚಿವ ಕೆ.ಎನ್‌. ಬಾಲಗೋಪಾಲ್‌ ಆರೋಪಿಸಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕೇಂದ್ರ ಸರ್ಕಾರದ ನಿಲುವಿನಿಂದ ಕೇರಳ ಸರ್ಕಾರದ ಸಂಪನ್ಮೂಲ ಕ್ರೋಡೀಕರಣ ಕ್ರಮಗಳಿಗೆ ಹಿನ್ನಡೆಯಾಗಿದೆ. ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯು(ಕೆಐಐಎಫ್‌ಬಿ) ಕೇಂದ್ರದಿಂದ ಪಡೆದಿರುವ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಒಟ್ಟಾರೆ ಸಾಲಕ್ಕೆ ಸೇರಿಸಿದೆ. ಈ ಮೂಲಕ ಉದ್ದೇಶಪೂರ್ವಕವಾಗಿ ರಾಜ್ಯದಲ್ಲಿ ಕೃತಕ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT