ಬೆಂಗಳೂರು: ಉದ್ಯಮಿ,ಬಯೋಕಾನ್ ಮುಖ್ಯಸ್ಥೆಕಿರಣ್ ಮಜುಂದಾರ್ ಶಾ ಅವರ ಪತಿ ಹಾಗೂ ಬಯೋಕಾನ್ ಇಂಡಿಯಾ ಮಾಜಿ ಉಪಾಧ್ಯಕ್ಷ ಜಾನ್ ಶಾ (65) ಸೋಮವಾರ ನಿಧನರಾಗಿದ್ದಾರೆ.
ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಂತ್ಯಕ್ರಿಯೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಸೋಮವಾರ ಸಂಜೆ ನೆರವೇರಲಿದೆ.
1999 ರಿಂದ ಜಾನ್ ಶಾ ಅವರು ಬಯೋಕಾನ್‌ನ ವಿವಿಧ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಇಂಗ್ಲೆಂಡ್ ಮೂಲದವರಾಗಿದ್ದ ಜಾನ್ ಶಾ ಅವರು ಗ್ಲಾಸ್ಗೋ ವಿಶ್ವವಿದ್ಯಾಲಯದ ಪದವೀದರರಾಗಿದ್ದರು. ಶಾ ನಿಧನಕ್ಕೆ ಔಧ್ಯೋಗಿಕ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.