ADVERTISEMENT

ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ವೀಕರಿಸಿದಿರಿ? ಕೇರಳದ ಸಂಸದರನ್ನು ಗದರಿದ ಸೋನಿಯಾ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 14:29 IST
Last Updated 17 ಜೂನ್ 2019, 14:29 IST
ಕೋಡಿಕುನ್ನಿಲ್ ಸುರೇಶ್ (ಕೃಪೆ:ಟ್ವಿಟರ್)
ಕೋಡಿಕುನ್ನಿಲ್ ಸುರೇಶ್ (ಕೃಪೆ:ಟ್ವಿಟರ್)   

ನವದೆಹಲಿ:17ನೇ ಲೋಕಸಭೆಯ ಅಧಿವೇಶನವು ಸಂಸದರ ಪ್ರಮಾಣ ವಚನ ಸ್ವೀಕಾರದೊಂದಿಗೆ ಸೋಮವಾರ ಅಧಿಕೃತವಾಗಿ ಆರಂಭವಾಗಿದೆ. ಈ ವೇಳೆ ಕೇರಳದ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನು ಬಿಜೆಪಿ ಸಂಸದರು ಡೆಸ್ಕ್‌ಗೆಕುಟ್ಟುತ್ತಾಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಂತರ ಸುರೇಶ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು.

ಆದರೆ ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ನೀಕರಿಸಿದಿರಿ? ನಿಮ್ಮ ಮಾತೃಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಬೇಕಿತ್ತು ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸುನಿಲ್ ಅವರನ್ನು ಗದರಿದ್ದಾರೆ.

ADVERTISEMENT

ಇದಾದನಂತರ ಕೇರಳದ ಕಾಂಗ್ರೆಸ್ ಸಂಸದರಾದ ರಾಜಮೋಹನ್ ಉಣ್ಣಿತ್ತಾನ್ಮತ್ತು ವಿ.ಕೆ. ಶ್ರೀಕಂಠನ್ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ನಿರ್ಧಾರದಿಂದ ಹಿಂದೆ ಸರಿದರು ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.