ADVERTISEMENT

ಕೋಲ್ಕತ್ತ ಅತ್ಯಾಚಾರ ಪ್ರಕರಣ: ಆರೋಪಿ ಮೇಲೆ ದೋಷಾರೋಪ ನಿಗದಿ

ಪಿಟಿಐ
Published 4 ನವೆಂಬರ್ 2024, 15:32 IST
Last Updated 4 ನವೆಂಬರ್ 2024, 15:32 IST
ಸಂಜಯ್‌ ರಾಯ್‌
ಸಂಜಯ್‌ ರಾಯ್‌   

ಕೋಲ್ಕತ್ತ: ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿನ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆಯ ಘಟನೆ ನಡೆದು 87 ದಿನಗಳ ಬಳಿಕ ಪ್ರಕರಣದ ಆರೋಪಿ ಸಂಜಯ್‌ ರಾಯ್‌ ವಿರುದ್ಧ ಕೋಲ್ಕತ್ತ ನ್ಯಾಯಾಲಯವು ಸೋಮವಾರ ದೋಷಾರೋಪ ನಿಗದಿ ಮಾಡಿದೆ.

‘ನವೆಂಬರ್‌ 11ರ ಬಳಿಕ ಪ್ರತಿ ನಿತ್ಯವೂ ಪ್ರಕರಣದ ವಿಚಾರಣೆ ನಡೆಸಲಾಗುವುದು’ ಎಂದೂ ನ್ಯಾಯಾಲಯ ಹೇಳಿದೆ. ರಾಯ್‌ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 64 (ಅತ್ಯಾಚಾರ), ಸೆಕ್ಷನ್‌ 66 (ಹತ್ಯೆ ಅಥವಾ ವ್ಯಕ್ತಿಯನ್ನು ಶಾಶ್ವತ ನಿಷ್ಕ್ರಿಯಗೊಳಿಸಿದ್ದಕ್ಕೆ ಶಿಕ್ಷೆ) ಸೆಕ್ಷನ್‌ 103 (ಹತ್ಯೆ ಮಾಡಿದ್ದಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ನಾನು ಏನೂ ಮಾಡಿಲ್ಲ. ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗುತ್ತಿದೆ. ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ. ಸರ್ಕಾರವು ನನ್ನನ್ನು ಸಿಲುಕಿಸುತ್ತಿದೆ ಮತ್ತು ಬಾಯಿ ಮುಚ್ಚಿಕೊಳ್ಳುವಂತೆ ಬೆದರಿಕೆ ಒಡ್ಡುತ್ತಿದೆ’ ಎಂದು ಆರೋಪಿ ಸಂಜಯ್‌ ರಾಯ್‌ ನ್ಯಾಯಾಲಯದಿಂದ ಹೊರಬರುತ್ತಿದ್ದಂತೆಯೇ ಪತ್ರಕರ್ತರಿಗೆ ಹೇಳಿದರು.

ADVERTISEMENT

ರಾಯ್‌ ಅವರ ಹೇಳಿಕೆ ಕುರಿತು ಪಶ್ಚಿಮ ಬಂಗಾಳ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಅಧೀರ್ ರಂಜನ್‌ ಚೌಧರಿ ಪ್ರಕ್ರಿಯಿಸಿದ್ದಾರೆ. ‘ಆರೋಪಿ ರಾಯ್‌ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳನ್ನು ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು. ಇಂಥ ಅಪರಾಧವನ್ನು ಒಬ್ಬ ವ್ಯಕ್ತಿ ಮಾತ್ರವೇ ಮಾಡಿರಲು ಸಾಧ್ಯವಿಲ್ಲ ಎಂದು ನಾವು ಹಿಂದಿನಿಂದಲೂ ಹೇಳುತ್ತಿದ್ದೇವೆ. ಸಿಬಿಐ ಹಾಗೂ ಕೋಲ್ಕತ್ತ ಪೊಲೀಸರು ಸೇರಿಕೊಂಡು ಒಳಒಪ್ಪಂದ ಮಾಡಿಕೊಂಡಿರಬಹುದು. ಈ ಬಗ್ಗೆ ನಮಗೆ ಸಂಶಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.