ADVERTISEMENT

ಕೋಲ್ಕತ್ತ: ನಿಲ್ಲದ ಕಿರಿಯ ವೈದ್ಯರ ಪ್ರತಿಭಟನೆ; ಮತ್ತೆ ಸಿಎಂ ಮಮತಾ ಭೇಟಿಗೆ ಆಗ್ರಹ

ಪಿಟಿಐ
Published 18 ಸೆಪ್ಟೆಂಬರ್ 2024, 2:08 IST
Last Updated 18 ಸೆಪ್ಟೆಂಬರ್ 2024, 2:08 IST
<div class="paragraphs"><p>ನಿಲ್ಲದ ಕಿರಿಯ ವೈದ್ಯರ ಪ್ರತಿಭಟನೆ</p></div>

ನಿಲ್ಲದ ಕಿರಿಯ ವೈದ್ಯರ ಪ್ರತಿಭಟನೆ

   

ಕೋಲ್ಕತ್ತ: ಆರ್‌.ಜಿ. ಕರ್‌ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.

ವಿನೀತ್ ಗೋಯಲ್ ಅವರ ಸ್ಥಾನಕ್ಕೆ ಮನೋಜ್ ಕುಮಾರ್ ವರ್ಮಾ ಅವರನ್ನು ಹೊಸ ಕೋಲ್ಕತ್ತಾ ಪೊಲೀಸ್ ಮುಖ್ಯಸ್ಥರನ್ನಾಗಿ ನೇಮಿಸಿ, ಇಬ್ಬರು ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ವಜಾಗೊಳಿಸಿದ್ದರೂ, ಧರಣಿಯನ್ನು ಮುಂದುವರಿಸಿರುವ ವೈದ್ಯರು, ಬೇಡಿಕೆ ಪೂರ್ಣವಾಗುವವರೆಗೆ ಕರ್ತವ್ಯಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಸಿಎಂ ಮಮತಾ ಅವರನ್ನು ಮತ್ತೊಮ್ಮೆ ಭೇಟಿಯಾಗಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ನಿನ್ನೆ (ಮಂಗಳವಾರ) ಸಂಜೆಯಿಂದ ಮಧ್ಯರಾತ್ರಿವರೆಗೂ ಸಭೆ ನಡೆಸಿದ ಪ್ರತಿಭಟನಕಾರರು, ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ನಮ್ಮ ಹೋರಾಟದ ಅರ್ಧ ಜಯವಾಗಿದೆ. ಎಲ್ಲ ಬೇಡಿಕೆಗಳು ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಆರೋಗ್ಯ ಕಾರ್ಯದರ್ಶಿ ಎನ್.ಎಸ್.ನಿಗಂ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದ ಕಿರಿಯ ವೈದ್ಯರ ಗುಂಪು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಇದರ ಜತೆಗೆ ಆಸ್ಪತ್ರೆಯೊಳಗೆ ವೈದ್ಯರ ಸುರಕ್ಷತೆಗೆ ಮೀಸಲಿಟ್ಟ ₹100 ಕೋಟಿ ಹಣವನ್ನು ರಾಜ್ಯ ಸರ್ಕಾರ ಹೇಗೆ ವಿನಿಯೋಗಿಸಲಿದೆ ಎನ್ನುವ ವಿವರಣೆ ನೀಡಬೇಕು ಎಂದು ಕೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.