ADVERTISEMENT

ಕೋರೆಗಾಂವ್–ಭೀಮಾ ತನಿಖಾ ಆಯೋಗಕ್ಕೆ ಸೂಕ್ತ ಕಚೇರಿ ನೀಡುವಂತೆ ಸರ್ಕಾರಕ್ಕೆ ಪತ್ರ

ಪಿಟಿಐ
Published 1 ನವೆಂಬರ್ 2021, 9:22 IST
Last Updated 1 ನವೆಂಬರ್ 2021, 9:22 IST
ಯುದ್ಧದ ಸ್ಮರಣಾರ್ಥ 1851ರಲ್ಲಿ ಕೊರೆಗಾಂವ್‍ನಲ್ಲಿ ಬ್ರಿಟಿಷರು ಸ್ಥಾಪಿಸಿರುವ ವಿಜಯಸ್ತಂಭ
ಯುದ್ಧದ ಸ್ಮರಣಾರ್ಥ 1851ರಲ್ಲಿ ಕೊರೆಗಾಂವ್‍ನಲ್ಲಿ ಬ್ರಿಟಿಷರು ಸ್ಥಾಪಿಸಿರುವ ವಿಜಯಸ್ತಂಭ   

ಪುಣೆ: ‘ಸರ್ಕಾರ ತಮಗೆ ಸೂಕ್ತ ಕಚೇರಿ ವ್ಯವಸ್ಥೆ ಮಾಡುವವರೆಗೂ, ಭೀಮಾ – ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಿಗದಿಪಡಿಸಿರುವ ಎಲ್ಲ ವಿಚಾರಣೆಗಳನ್ನು ಸ್ಥಗಿತಗೊಳಿಸುವುದಾಗಿ ಕೋರೆಗಾಂವ್–ಭೀಮಾ ವಿಚಾರಣಾ ಆಯೋಗವು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸ್ಮಾರಕವೊಂದರ ಬಳಿ ಜನವರಿ 2018 ರಂದು ನಡೆದ ಹಿಂಸಾಚಾರದ ಕುರಿತು ಈ ಆಯೋಗ ತನಿಖೆ ನಡೆಸುತ್ತಿದೆ. ಇಬ್ಬರು ಸದಸ್ಯರನ್ನೊಳಗೊಂಡ ಆಯೋಗಕ್ಕೆ ನಿವೃತ್ತ ನ್ಯಾಯಮೂರ್ತಿ ಜೆ.ಎನ್‌.ಪಟೇಲ್‌ ಮುಖ್ಯಸ್ಥರಾಗಿದ್ದಾರೆ.

ಈ ಕುರಿತು ಸೋಮವಾರ ಸುದ್ದಿ ಸಂಸ್ಥೆಗೆ ಈ ಮಾಹಿತಿ ನೀಡಿರುವ ಆಯೋಗದ ವಕೀಲ ಆಶಿಶ್ ಸತ್ಪುತೆ, ‘ಪ್ರಸ್ತುತ ಈ ಸಮಿತಿಯು ಮುಂಬೈನಲ್ಲಿರುವ ರಾಜ್ಯ ಮಾಹಿತಿ ಆಯೋಗದ ಕಚೇರಿಯ ಆವರಣದಿಂದ ಕಾರ್ಯನಿರ್ವಹಿಸುತ್ತಿದೆ. ಈ ಸ್ಥಳ ಬಹಳ ಚಿಕ್ಕದಾಗಿದ್ದು, ಕೋವಿಡ್‌–19 ಮಾನದಂಡಗಳನ್ನು ಅನುಸರಿಸಲು ಕಷ್ಟವಾಗುತ್ತಿದೆ‘ ಎಂದು ಹೇಳಿದ್ದಾರೆ.

ADVERTISEMENT

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅ.31ರಂದುಆಯೋಗದ ಕಾರ್ಯದರ್ಶಿ ವಿವಿ.ವಿ.ಪಳನಿತ್‌ಕರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ‘ಶೀಘ್ರದಲ್ಲೇ ಆಯೋಗಕ್ಕೆ ಮುಂಬೈನಲ್ಲಿ ಸೂಕ್ತ ಕಚೇರಿ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ಅ.28ರಂದು ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎನ್. ಪಟೇಲ್ ಅವರು, ಆಯೋಗಕ್ಕೆ ಸೂಕ್ತ ಕಚೇರಿ ನೀಡಲು ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ನಿರ್ದೇಶನ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.