ನವದೆಹಲಿ : ಅತ್ಯಾಚಾರ ಸಂತ್ರಸ್ತೆಯ ತಂದೆಯ ಹತ್ಯೆ ಆರೋಪಿಯಾಗಿದ್ದ ಉನ್ನಾವ್ ಅತ್ಯಾಚಾರ ಪ್ರಕರಣದ ಅಪರಾಧಿ ಕುಲ್‌ದೀಪ್ ಸೆಂಗರ್ ಮೇಲಿನ ಅಪರಾಧ ಸಾಬೀತಾಗಿದೆ ಎಂದು ದೆಹಲಿಯ ಜಿಲ್ಲಾ ನ್ಯಾಯಾಲಯ ಬುಧವಾರ ಘೋಷಿಸಿದೆ.
‘ಸಂತ್ರಸ್ತೆಯ ತಂದೆಯ ಹತ್ಯೆ ಮಾಡುವುದು ಸೆಂಗರ್ ಉದ್ದೇಶ ಆಗಿರಲಿಲ್ಲ. ಆದರೆ ಅವರನ್ನು ಅಮಾನವೀಯವಾಗಿ ಥಳಿಸಲಾಗಿತ್ತು. ಅದರ ಪರಿಣಾಮವಾಗಿ ಅವರು ಸಾವನ್ನಪ್ಪಿದರು’ ಎಂದು ನ್ಯಾಯಾಧೀಶ ಧರ್ಮೇಶ್ ಶರ್ಮಾ ಹೇಳಿದ್ದಾರೆ.
2017ರಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದ ಸೆಂಗರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು 2019ರ ಡಿಸೆಂಬರ್‌ನಿಂದಲೇ ಆತನನ್ನು ಜೈಲಿನಲ್ಲಿರಿಸಲಾಗಿದೆ. ಸಂತ್ರಸ್ತೆಯ ತಂದೆಯು 2018ರ ಏಪ್ರಿಲ್ 9ರಂದು ನ್ಯಾಯಾಂಗ ಬಂಧನದಲ್ಲಿದ್ದಾಗ ಸಾವನ್ನಪ್ಪಿದ್ದರು.
2018ರ ಏಪ್ರಿಲ್ ತಿಂಗಳಲ್ಲಿ ಸಂತ್ರಸ್ತೆಯ ತಂದೆಯ ಜತೆ ನಡೆದ ಸಣ್ಣ ವಾಗ್ವಾದವು ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು. ಸೆಂಗರ್‌ನ ಸಹೋದರ ಅತುಲ್ ಸೆಂಗರ್ ಹಾಗೂ ಆತನ ಸಹಚರರು ಸೇರಿ ಸಂತ್ರಸ್ತೆಯ ತಂದೆಯ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.