ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಕುಲ್‍ಗಾಂ ಜಿಲ್ಲೆಯಲ್ಲಿ ಭದ್ರತಾಪಡೆ ಭಾನುವಾರ ಬೆಳಿಗ್ಗೆ ನಡೆಸಿದ ಎನ್‌ಕೌಂಡರ್‌ನಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ.
ಉಗ್ರರ ವಿರುದ್ಧದ ಕಾರ್ಯಾಚರಣೆ ಬಳಿಕ ಸ್ಥಳದಲ್ಲಿ ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಉಗ್ರರಿಗಾರಿ ಶೋಧ ಕಾರ್ಯಾಚರಣೆ ಮುಂದುವರಿದಿದೆ
ಕುಲ್‍ಗಾಂ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಉಗ್ರರು ಪೊಲೀಸ್ ಕಾನ್‌ಸ್ಟೆಬಲ್ ಮೊಹಮ್ಮದ್ ಸಲೀಂ ಎಂಬುವರನ್ನು ಅಪಹರಿಸಿದ್ದರು. ಅವರು ಶವವಾಗಿ ಶನಿವಾರ ಪತ್ತೆಯಾಗಿದ್ದರು.
ಕಾನ್‌ಸ್ಟೆಬಲ್‌ಅನ್ನು ಹತ್ಯೆಗೈದ ಉಗ್ರರಿಗಾಗಿ ಶೋಧ ನಡೆಸಿದ್ದ ಭದ್ರತಾಪಡೆ ಎನ್‌ಕೌಂಡರ್‌ನಲ್ಲಿ ಮೂವರನ್ನು ಹೊಡೆದುರುಳಿಸಿದೆಎಂದು ಮೂಲಗಳು ತಿಳಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.
ಕಾನ್‌ಸ್ಟೆಬಲ್‌ಮೊಹಮ್ಮದ್ ಸಲೀಂ ಅವರನ್ನು ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದರು.
ಮೊಹಮ್ಮದ್ ಸಲೀಂ ಅವರ ಪಾರ್ಥಿವ ಶರೀಕ್ಕೆ ಶನಿವಾರ ಪೊಲೀಸ್ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿ, ಅಂದ್ಯಕ್ರಿಯೆಗೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.