ಪ್ರಯಾಗ್‌ರಾಜ್: ಮಹಾಕುಂಭಮೇಳದಲ್ಲಿ ಭಾಗವಹಿಸಿರುವ ‘ಸಾವೆ ಶಾರದಾ ಸಮಿತಿ ಕಾಶ್ಮೀರ’ ಸದಸ್ಯರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಶಾರದಾ ಪೀಠಕ್ಕೆ ಪ್ರವೇಶಿಸಲುಕಾಶ್ಮೀರಿ ಪಂಡಿತರಿಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
‘ಸಾವೆ ಶಾರದಾ ಸಮಿತಿ ಕಾಶ್ಮೀರ’ದ ಸಂಸ್ಥಾಪಕ ರವೀಂದರ್ ಪಂಡಿತ್, ‘ಶಾರದಾ ಪೀಠವುಪ್ರಾಚೀನ ಧಾರ್ಮಿಕ ಕೇಂದ್ರವಾಗಿದೆ. ಅದು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ವ್ಯಾಪ್ತಿಗೆ ಸೇರಿದಾಗಿನಿಂದಲೂ, ಅಲ್ಲಿಗೆ ತೆರಳಲು ಯಾತ್ರಿಗಳಿಗೆ ವೀಸಾ ಸೌಲಭ್ಯ ಒದಗಿಸಿಕೊಡಬೇಕು ಎಂದು ನಾವು ಭಾರತ ಹಾಗೂ ಪಾಕಿಸ್ತಾನ ಸರ್ಕಾರಗಳನ್ನು ಆಗ್ರಹಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಪಾಕಿಸ್ತಾನ ಸರ್ಕಾರಕ್ಕೆ ಪತ್ರ ಬರೆದಿದೆ. ‘ಮುಖ್ಯ ಅರ್ಚಕರೂ ಸಕಲ ಮೂಲಭೂತ ಸೌಕರ್ಯ ಕಲ್ಪಿಸುವಂತೆಪಿಒಕೆ ಅಡಳಿತವನ್ನು ಒತ್ತಾಯಿಸಿದ್ದಾರೆ’ ಎಂದೂ ತಿಳಿಸಿದರು.
ಗಡಿ ನಿಯಂತ್ರಣಾ ರೇಖೆಗೆ ಹೊಂದಿಕೊಂಡಿರುವ ನೀಲಂ ಕಣಿವೆ ಪ್ರದೇಶದಲ್ಲಿ ಶಾರದಾ ಪೀಠವಿದೆ. ದೇಶ ವಿಭಜನೆಯ ನಂತರ ಪವಿತ್ರ ಧಾರ್ಮಿಕ ಸ್ಥಳಕ್ಕೆ ಭಾರತೀಯ ಯಾತ್ರಿಗಳ ಸಂಖ್ಯೆ ಕ್ರಮೇಣ ಇಳಿಮುಖವಾಯಿತು.
2018ರಲ್ಲಿ ಪಾಕಿಸ್ತಾನ ಸರ್ಕಾರವು ಗಡಿಪ್ರದೇಶದಲ್ಲಿರುವಕರ್ತಾರ್‌ಪುರ ಕಾರೀಡಾರ್‌ಮೂಲಕ ಗುರುದ್ವಾರಕ್ಕೆ ಭೇಟಿ ನೀಡಲುಸಿಖ್ ಯಾತ್ರಿಕರಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿಕಾಶ್ಮೀರ ಪಂಡಿತರು ಶಾರದಾ ಪೀಠಕ್ಕೆ ಪ್ರವೇಶ ಅವಕಾಶ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಮನಹರಿಸಬೇಕು ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಪೀಪಲ್ಸ್ ಡೆಮಾಕ್ರೆಟಿಕ್ ಫ್ರಂಟ್ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.